Verse 1

ಸಹಸ್ರ ನಾಲಿಗೆನಗಿದ್ದು
ಸಹಸ್ರ ಬಾಯ್ಗಳಿದ್ದರೆ
ಕೃತಜ್ಞಾನಾಗಿ ಅಡ್ಡ ಬಿದ್ದು
ನನ್ನಿಡಿ ಹೃತ್ತಿನಿಂದಲೆ
ದೈವಾನುಗ್ರಹ ಮಹಿಮೆ
ಆದಷ್ಟು ಹಾಡುತ್ತಿರುವೆ.

Verse 2

ನನ್ನಾತ್ಮವೇ ಸಂತುಷ್ಟನಾದ
ನಿನ್ನಿಂದ ಸ್ತೋತ್ರ ಕೇಳನೋ?
ಎಚ್ಚೆತ್ತು ನಿನ್ನ ದೇವರಾದ
ಸರ್ವೇಶನನ್ನು ಸ್ತುತಿಸೊ
ನನ್ನಲ್ಲಿ ಪ್ರತಿ ಉಸುರು
ಆಗಿರಲೊಂದು ಗೀತವು.

Verse 3

ವೃಕ್ಷಾದಿಯೇ ಅರಣ್ಯದಲ್ಲಿ
ಸರ್ವೇಶನಾಣ್ಮೆ ಹೊಗಳು
ತೃಣಾದಿಯೇ ತಗ್ದಿನ್ನೆಯಲ್ಲಿ
ಯೆಹೋವನೊಲ್ಮೆ ತಿಳಿಸು
ಸಮಸ್ತ ಚಂದ ಪೂಗಳೇ
ಸಾರಿರಿ ದೇವಮಹಿಮೆ.

Verse 4

ಅದ್ಭುತಕೆಲ್ಲ ಲೆಕ್ಕವಿಲ್ಲ
ಅದನ್ನು ವರ್ಣಿಸೋದಕೆ
ನನ್ನಲ್ಪ ಶಕ್ತಿ ಸಾಲೊದಿಲ್ಲ
ಸಮಸ್ತ ಜೀವರಾಶಿಯೆ
ನಾವೊಟ್ಟಿಗೆಮ್ಮ ದೇವರ
ಸಂಸ್ತುತಿಯನ್ನು ಮಾಡುವ.

Verse 5

ಶರೀರ ಜೀವ ಆಸ್ತಿಗಾಗಿ
ನೀ ಸ್ತೋತ್ರ ಹೊಂದು ತಂದೆಯೇ
ಪ್ರಪಂಚದೆನ್ನುದ್ಯೋಗಕ್ಕಗಿ
ನಿನ್ನೊಲ್ಮೆಯಂ ಕೊಂಡಾಡುವೆ
ಕ್ಷೇಮಾದಿಗಳಿಗೋಸ್ಕರ
ತಕ್ಕೋ ಸಹಸ್ರ ಸ್ತುತಿಯ.

Verse 6

ಕ್ರಿಸ್ತ್ಯೇಸುವೇ ಕಾರುಣ್ಯದಿಂದ
ನೀ ಕ್ರೂರ ಮೃತ್ಯು ಸಹಿಸಿ
ನನ್ನನ್ನು ನರಕಾಗ್ನಿಯಿಂದ
ವಿಮುಕ್ತನಗ ಮಾಡಿದಿ
ನನೀಶನಾದ ನಿನ್ನನೆ
ನಿರಂತ್ರ ಹಾಡಿಪಾಡುವೆ.

Verse 7

ಪುತ್ರಸ್ವೀಕಾರ ಮುದ್ರೆಯಾದ
ಪವಿತ್ರ ಆತ್ಮನಿನಗೆ
ಸಂಸ್ತುತಿ ಎಷ್ಟೊ ಆಶೀರ್ವಾದ
ನಿನ್ನಿಂದ ನಾನು ಹೊಂದಿದೆ
ನನ್ನಲ್ಲಿ ಒಳ್ಳೆದೆಲ್ಲವು
ನಿನ್ನೋಜೆಯಿಂದ ಆದದು.

Verse 8

ಯಾರೆನ್ನ ಪಾಲಿಸುತಿದ್ದಾರೆ?
ನೀನಲ್ಲವೋ ಸುಧನಿಯೇ?
ಯಾರೆನ್ನ ಕಾಯುತಿರುತಾರೆ
ನೀನಲ್ಲವೋ ಸೈನ್ಯೇಶನೇ?
ನನ್ನಪರಾಧದಾವಳಿ
ಅಮಿತವಾಗಿ ತಾಳಿದಿ.

Verse 9

ಸಂತೋಷದಿಂದ ಶಿಕ್ಷೆಯನ್ನು
ನಾ ತಾಳಿ ನಿನ್ನ ಪ್ರೀತಿಯೆ
ನಂಗಿತ್ತ ಹೌರ ಕ್ರೂಜೆಯನ್ನು
ಕಿರೀಟ ನೋಡಿ ಹೋರುವೆ
ಅದೆನ್ನ ತಿದ್ದೊದಲ್ಲದೆ
ಅಮೂಲ್ಯ ಸಾಕ್ಷಿ ಕೊಡುತೆ.

Verse 10

ನನ್ನನ್ನು ಎಲ್ಲ ವ್ಯಥೆಯಲ್ಲಿ
ಉದ್ಧಾರಮಾಡೊ ಕೃಪೆಯು
ನನ್ನಿಡಿ ಜೀವಕಾಲದಲ್ಲಿ
ಎಷ್ಟೋ ಅವರ್ತಿ ತೋಚಿತು
ಗಂಡಾಂತ್ರ ದೊಡ್ಡದಾಗಲು
ಸಹಾಯ ಕೂಡ ದೊಡ್ಡದು.

Verse 11

ನಾ ನಿನ್ನ ಹರ್ಷದಿಂದ ತುಂಬಿ
ಸದಾ ಕೊಂಡಾಡಿ ಬೇಕಲ್ಲೋ?
ವಿಜಯವಾಗೊದೆಂದು ನಂಬಿ
ಮುಂದಕ್ಕೆ ಹೋಗ ಬಾರದೋ?
ಸತ್ಥೋಗೊ ಗತಿಯಲ್ಲಿಯು
ನಿಶ್ಚಿಂತನಾಗ ಬಲ್ಲೆನು.

Verse 12

ಈ ನಾಲಿಗಿನ್ನು ಆಡುವಲ್ಲಿ
ನಿನ್ನೊಲ್ಮೆ ಹಾಡುತಿರುವೆ
ಈ ಹೃದವಿನು ಹಾರುವಲ್ಲಿ
ಸದಾ ಸಂಗೀತಭಜನೆ
ನಾ ಗೈದು ಸ್ವರ ತಪ್ಪಲು
ನಿಟ್ಟುಸುರಿಟ್ಟು ಹಾಡ್ವೆನು.

Verse 13

ಈ ಅಲ್ಪ ಸ್ತುತಿ ಭೂಮಿಯಲ್ಲಿ
ನೀನೊಲಿದಂಗೀಕರಿಸು
ಅದಿನ್ನು ಮುಂದೆ ದಿವದಲ್ಲಿ
ಇನ್ನೆಷ್ಟೊ ರಮ್ಯವಾದಿತು
ವಿಮುಕ್ತರೊಂದಿಗ್ಹಾಡುವೆ
ಸಹಸ್ರ ಹಲ್ಲೆಲೂಯವೇ.

Go to top