Verse 1

ಕರ್ತನ ಸ್ತೋತ್ರವ ಮಾಡಿರೆಲ್ಲ
ಸ್ತೋತ್ರವ ಮಾಡೆನ್ನಾತ್ಮವೇ.
ನನ್ನುಸುರಾಡುವ ಕಾಲವೆಲ್ಲ
ಹೊಗಳುತಿರ್ವೆನಾತನ್ನೇ.
ಶರೀರ ಪ್ರಾಣ ಆತ್ಮವು
ಆತನು ಕೊಟ್ಟ ದಾನವು
ಹಲ್ಲೆಲೂಯ ಹಲ್ಲೆಲೂಯ.

Verse 2

ಅಸ್ಥಿರ ಜಾತೀಯ ರಾಜರಲ್ಲಿ
ನಂಬಿಕೆ ಇಡ ಬಹುದೇ?
ರಕ್ಷಣೆಯಿಲ್ಲದ ನರರಲ್ಲಿ
ಕೋರಿಕೆ ತಾಳ ಬಹುದೇ?
ಸ್ವಜೀವ ಕಾಯಲಾರರು
ನಿತ್ಯನು ನಮ್ಮ ದೇವರು
ಹಲ್ಲೆಲೂಯ ಹಲ್ಲೆಲೂಯ.

Verse 3

ತನ್ನ ನಿರೀಕ್ಷೆ ಯೆಹೋವನಲ್ಲಿ
ಇಡುವ ಪಾಪಿ ಧನ್ಯನೆ.
ಯಾಕೋಬನೀಶನ ಕೃಪೆಯಲ್ಲಿ
ನಮ್ಮಯ ನಿತ್ಯ ರಕ್ಷಣೆ.
ಆಕಾಶ ಭೂಮಿ ಸಾಗರ
ಆತನ ಕೈಯ ಕೆಲಸ
ಹಲ್ಲೆಲೂಯ ಹಲ್ಲೆಲೂಯ.

Verse 4

ಅನ್ಯಾಯ ಹೊಂದಿದ ದೀನರಿಂಗೆ
ತೀರಿಸಿ ನೀತಿನ್ಯಾಯವ.
ಹಸಿದು ಬೇಡುವ ಜನರಿಂಗೆ
ಕೊಡುವನಾತ ರೊಟ್ಟಿಯ.
ಸಮಸ್ತ ಬದ್ಧಜನವ
ಬಿಡಿಸುತ್ತಾನೆ ರಕ್ಷಕ
ಹಲ್ಲೆಲೂಯ ಹಲ್ಲೆಲೂಯ.

Verse 5

ಕೊಡುವನಾತನು ಕಣ್ಗಳನ್ನ
ಕುರುಡರಿಂಗೆ ಕೃಪೆಯಿಂ
ಭಾರದಿ ಬಾಗಿದ ಪಾಪಿಯನ್ನ
ಎತ್ತುವನಾತ ತಾಳ್ಮೆಯಿಂ.
ಒಬ್ಬೊಬ್ಬ ನೀತಿವಂತನ್ನ
ಮಾಡುವನಾತ ಪ್ರೀತಿಯ
ಹಲ್ಲೆಲೂಯ ಹಲ್ಲೆಲೂಯ.

Verse 6

ಆಶ್ರಯಸ್ಥಾನವು ನಿತ್ಯದಲ್ಲಿ
ಕರ್ತನು ಪರದೇಶಿಗೆ.
ನಿರ್ಲಯದುರ್ಗವು ಕಷ್ಟದಲ್ಲಿ
ದಿಕ್ಕನ್ನು ಕಾಣದಾತಗೆ.
ಅನಾಥ ವಿಧವೆಯರ್ಗೆ
ಆಧಾರ ನಮ್ಮ ಕರ್ತನೆ
ಹಲ್ಲೆಲೂಯ ಹಲ್ಲೆಲೂಯ.

Verse 7

ಆದರೆ ದುಷ್ಟರ ಮಾರ್ಗವನ್ನು
ಡೊಂಕಾಗುವಂತೆ ಮಾಡುವ
ಅವರ ಸರ್ವ ಕುಯುಕ್ತಿಯನ್ನು
ನಶಿಸುತಾನೆ ಒಡೆಯ.
ಸಂಪೂರ್ಣ ಜಯಶಾಲಿಯು
ಯೆಹೋವನಾದ ದೇವರು
ಹಲ್ಲೆಲೂಯ ಹಲ್ಲೆಲೂಯ.

Verse 8

ಪ್ರೀತಿಯ ದೇವರು ಆಳುತಾನೆ
ಚಿಯೋನೆ ಯುಗಯುಗಕೆ
ಯೆಹೋವನೊಬ್ಬನೆ ಆಗಿದ್ದಾನೆ
ರಾಜಾಧಿರಾಜ ವಿಶ್ವಕೆ.
ಸಮಸ್ತ ಭೂಜನಾಂಗವೆ
ಸ್ತೋತ್ರವ ಮಾಡು ಕರ್ತಗೆ
ಹಲ್ಲೆಲೂಯ ಹಲ್ಲೆಲೂಯ.

Verse 9

ಕರ್ತನ ಸ್ತೋತ್ರವ ಮಾಡಿರೆಲ್ಲ
ಸ್ತೊತ್ರವ ಮಾಡೆನ್ನಾತ್ಮವೇ.
ನನ್ನುಸುರಾಡುವ ಕಾಲವೆಲ್ಲ
ಹೊಗಳುತಿರ್ವೆನಾತನ್ನೇ.
ಶರೀರ ಪ್ರಾಣ ಆತ್ಮವು
ಆತನು ಕೊಟ್ಟ ದಾನವು
ಹಲ್ಲೆಲೂಯ ಹಲ್ಲೆಲೂಯ.

Go to top