Verse 1

ಭೂಪರಲೋಕದೇವರೇ
ಸಮಸ್ತ ಕೊಡುವಾತನೇ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 2

ನಿನ್ನಿಂದ ಸೂರ್ಯ ತಪ್ಪದೆ
ಸದಾ ಉದಯವಾಗುತೆ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 3

ಭೂಫಲವನ್ನು ಹುಟ್ಟಿಸಿ
ಸಮಸ್ತ ಜೀವ ಕಾಯುತ್ತೀ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 4

ಸಂಸಾರ ಕ್ಷೇಮ ಬಾಳಿಕೆ
ನಿನ್ನಾಶೀರ್ವಾದದಿಂದಲೆ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 5

ಈ ಲೋಕ ರಕ್ಷಿಸೊದಕೆ
ಮಗನ್ನ ಕೊಟ್ಟ ತಂದೆಯೆ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 6

ನೀ ಕೊಟ್ಟ ಶುದ್ಧ ವಾಕ್ಯವು
ನನ್ನಾತ್ಮಕೆ ಆಧಾರವು
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 7

ಮೆಲ್ಲೋಕದಲ್ಲಿ ಬಾಧ್ಯತೆ
ನಾನೀಯ್ವೆನೆಂದ ತಂದೆಯೆ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 8

ನನ್ನನ್ನು ನಿನ್ನ ಸೇವೆಗೆ
ಸಂತೋಷದಿಂದ ಕೊಡುವೆ
ನಿನ್ನನ್ನು ಮತ್ರ ನಂಬುವೆ
ದಯಾಳುವೇ.

Go to top