Verse 1

ಸರ್ವೋನ್ನತಂಗೆ ಸ್ತೋತ್ರವು
ಆತಂಗೆ ಸ್ಥಿರ ಸೇವೆ
ಮಾಡೋಣ ನಾವು ನಿತ್ಯವು
ಸುಭದ್ರ ಬಾಳುತೇವೆ.
ನಮ್ಮಲ್ಲಿ ದೇವರೊಲ್ಮೆಯೂ
ಅನಂತ ಸಮಾಧಾನವೂ
ನಿಂತ್ಹೋಯಿತೆಲ್ಲ ಕಾಟ.

Verse 2

ಸಮಸ್ತ ಸೃಷ್ಟಿರಾಜನೇ
ಆಶ್ಚರ್ಯ ನಿನ್ನ ನೀತಿ
ನಮ್ಮತಿಪ್ರಿಯ ತಂದೆಯೇ
ಅತ್ಯಂತ ನಿನ್ನ ಪ್ರೀತಿ.
ಅಶೋಧ್ಯ ನಿನ್ನ ಜ್ಞಾನವು
ಸಂಪೂರ್ಣ ನಿನ್ನ ಶಕ್ತಿಯು
ನೀ ಒಳ್ಳೆ ಯಜಮಾನ.

Verse 3

ಶ್ರೀ ದೇವಪುತ್ರ ಯೇಸುವೆ
ನೀ ತಂದೇ ಪ್ರತಿಕಾಂತಿ
ಪಾಪಾಬ್ಧಿ ಮಗ್ನ ಜನಕೆ
ನಿನ್ನಿಂದ ಬಂತು ಶಾಂತಿ
ನೋಡೆಮ್ಮ ದುಃಖಸ್ಥಿತಿಯಂ
ತಾರಯ್ಯ ಹೃದಸುಖವಂ
ನಮ್ಮಲ್ಲಿ ದಯವಿಟ್ಟು.

Verse 4

ದೇವಾತ್ಮ ಪರಿಶುದ್ಧನೆ
ಸೈತಾನಬಲ ಮುರಿ
ವಿಮುಕ್ತವಾದ ಸಭೆಗೆ
ಕೊಡೀಶಭಕ್ತಿಯುರಿ.
ನೀ ನೀಗಿಸೆಲ್ಲ ಕಷ್ಟವಂ
ಕೊಡೈ ವಿಶ್ರಾಂತಿಗತಿಯಂ
ನಮ್ಮಲ್ಲಿ ವಾಸಮಾಡು.

Go to top