Verse 1

ಎಲ್ಲಾನು ಭೋಗಿಸಿ
ದಯಾಳು ಕರ್ತನಿಂದ
ಕೃತಜ್ಞಾರಾಗಿರಿ
ಮನೋವಾಕ್ಕಾಯದಿಂದ.
ನಮ್ಮನ್ನು ರಕ್ಷಿಸಿ
ತಾಯ್ಗರ್ಭದಿಂದಲೇ
ಸಹಸ್ರ ವರವ
ಕೊಟ್ಟವನಾತನೇ.

Verse 2

ಉದಾರಿ ದೇವರೆ
ಸುಶಾಂತ ಹೃದವನ್ನು
ಸುಕ್ಷೇಮದೊಂದಿಗೆ
ಕೊಟ್ಟೆಲ್ಲ ಭಕ್ತರನ್ನು
ಕಾಪಾಡಿ ರಕ್ಷಿಸು
ಕಡೇಲಿ ನಮಗು
ಆ ಲೋಕದೊಳಗೆ
ಮೋಕ್ಷಾನುಗ್ರಹಿಸು.

Verse 3

ಪಿತಾಪುತ್ರಾತ್ಮಕೆ
ಮಹೋಚ್ಚ ಪೀಠದಲ್ಲಿ
ಕೂತಿರುವಾತಗೆ
ಸಮಸ್ತ ಸೃಷ್ಟಿಯಲ್ಲಿ
ಏಳುತ್ತೆ ಸ್ತೋತ್ರವು
ತ್ರೈಲೋಕ್ಯ ಕರ್ತಗೆ
ನಾವೂ ಸಂಗೀತವ
ಹಾಡೋಣ ಭ್ರಾತ್ರರೆ.

Go to top