Verse 1

ಸ್ತೋತ್ರವನುತ್ತಮ
ದೇವರಿಗರ್ಪಿಸ ಬನ್ನಿ.
ಊರ್ಧ್ವದಿ ಕರ್ತಗೆ
ಮಹಿಮೆಯಾಗಲಿ ಅನ್ನಿ.
ಹರುಷದಿ
ದೂತರ ಸಂಘದಲಿ
ಸ್ತೋತ್ರಸುಗಂಧವ ತನ್ನಿ.

Verse 2

ಭೂದಿವಲೋಕಗಳಾತನ
ಸ್ವಾಶ್ರಿತ ರಾಜ್ಯ
ಯಾವನು ಭೂದಿವರಾಜನ
ಸಂಗಡ ವ್ಯಾಜ್ಯ
ಮಾಡುವನು?
ಆತನು ನುಡಿಯಲು
ಮರ್ತ್ಯರಗದ್ದಲ ತ್ಯಾಜ್ಯ.

Verse 3

ಕ್ರಿಸ್ತನು ಕ್ರಯಕೆ ಕೊಂಡ
ಜನಾಂಗವಿದ್ದೇವೆ
ರಾಜನ ಚಿತ್ತಕೆ ಒಪ್ಪಲಿ
ದಾಸರ ಸೇವೆ.
ಒಡೆಯನು
ನಮಗೆ ಒಲೆಯಲು
ಸುಖದಿ ಜೀವಿಸುತೇವೆ.

Go to top