Verse 1

ಬೇಡ ಭಯ
ಯೇಸು ದಯ
ಶರಣಾರ್ಥಿಕೋಟೆಯೇ.
ಎಲ್ಲ ತಾನು
ನಡಿಸ್ಯಾನು
ಉತ್ತಮ ಪ್ರಕಾರವೇ.

Verse 2

ನಿನ್ನನಾಯ್ದ
ನಿನ್ನ ಕಾಯ್ದ
ಕರ್ತ ನಿದ್ದೆಗೊಂಡಾನೆ?
ಭಯ ಬಿಟ್ಟು
ನಂಬಿಗಿಟ್ಟು
ಹೃದವೆತ್ತು ಮೇಲಕೆ.

Verse 3

ತಡದಲ್ಲು
ತ್ವರೆಯಲ್ಲು
ಆತ ತಂದೆ ನಿನಗೆ
ನಿನ್ನ ಕಷ್ಟ
ನಿನ್ನ ನಷ್ಟ
ಆತ ಬಲ್ಲ ಮಗನೆ.

Verse 4

ಕೃಪಾಪತಿ
ಶ್ರೇಷ್ಠ ಗತಿ
ನಿಂಗೆ ನೇಮಿಸಿಹನು.
ಶಾಂತನಾಗಿ
ಇರಲಾಗಿ
ನಿನ್ನ ಚಿಂತೆ ಹೋಗೊದು.

Verse 5

ನಿನ್ನ ಸುಖ
ನಿನ್ನ ದುಃಖ
ಕೊಡುವವನಾತನು.
ಚಿಂತೆಯೇನು?
ಭಯವೇನು?
ಆತಗೆಲ್ಲ ಒಪ್ಪಿಸು.

Verse 6

ಹೊರು ನಿನ್ನ
ಯೇಸುವಿನ
ಹೌರವಾದ ಕ್ರೂಜೆಯ
ನಿನಗಲ್ಲಿ
ಪೀಠದಲ್ಲಿ
ಈಯುವನ್ ಕಿರೀಟವ.

Go to top