Verse 1

ನಿನ್ನ ಮಾರ್ಗವನ್ನು
ಕರ್ತಗೊಪ್ಪಿಸು
ಆತನು ನಿನ್ನನ್ನು
ನಡಿಸುವನು.
ಒಳ್ಳೇದನ್ನು ಮಾಡು
ದೇವರಲ್ಲಿಯೇ
ನಂಬುತಾ ಕೊಂಡಾಡು
ಅನುದಿನವೇ.

Verse 2

ಮೇಲೆ ನೋಡು ಅಲ್ಲಿ
ಕ್ರಿಸ್ತ ಯೇಸುವು
ಊರ್ಧ್ವ ಪೀಠದಲ್ಲಿ
ಕೂತುಕೊಂಡನು.
ಆತ ನಮಗಾಗಿ
ಕಷ್ಟ ಶೋಧನೆ
ತಾಳಿದಾತನಾಗಿ
ಹೋದನಲ್ಲಿಗೆ.

Verse 3

ನಿನ್ನ ಚಿಂತೆಯೆಲ್ಲ
ತಿಳಿಸಾತಗೆ
ನಿನ್ನ ಭಾರವೆಲ್ಲ
ಆತ ಹೊರನೆ?
ನಿನ್ನ ನೋಡುತ್ತಾನೆ
ಹುಟ್ಟೋ ಮೊದಲು
ಪ್ರೀತಿ ಮಾಡಿದ್ದಾನೆ
ನಿನ್ನ ಬಿಡನು.

Verse 4

ಆತನಲ್ಲಿ ದಯ
ಪ್ರೀತಿ ನಂಬಿಕೆ
ಆದರ ಸಹಾಯ
ದೊರಕುತ್ತದೆ.
ದಿವ್ಯ ಚಿತ್ತ ನೆಚ್ಚಿ
ಮೌನವಾಗಿರೋ
ಕರ್ತನಿಂಗೆ ಮೆಚ್ಚಿ
ಸುಖ ಪಡಕೋ.

Verse 5

ಭರವಸವಿಟ್ಟು
ನಿತ್ಯ ಪ್ರಾರ್ಥಿಸು
ಅನುಮಾನ ಬಿಟ್ಟು
ಧೈರ್ಯ ವಾಗಿರು.
ತನ್ನ ದೇವರಲ್ಲಿ
ನೀತಿವಂತನು
ಸಮಾಧಾನದಲ್ಲಿ
ನಿಲ್ಲ ತಕ್ಕದ್ದು.

Verse 6

ಆಗ ತಾಪತ್ರಯ
ನಿಂತು ಹೋಗೊದು
ಕರ್ತನತಿಶಯ
ದಯ ತಪ್ಪದು.
ಏನು ಮಾರ್ಗದಲ್ಲಿ
ಒದಗಿದರು
ದಿವ್ಯ ಕೃಪೆಯಲ್ಲಿ
ಹಿತವಾಗೊದು.

Verse 7

ಆತ ನಡಿಸೋನು
ತನ್ನ ಭಕ್ತನ
ತೃಪ್ತಿ ಪಡಿಸೋನು
ಪರಲೋಕದ
ಭಾಗ್ಯದತಿಶಯ
ದಯಪಾಲಿಸಿ.
ಭಕ್ತಸಮುದಾಯ
ಸ್ತೋತ್ರ ಮಾಡಲಿ.

Go to top