Verse 1

ಚಿಂತೆ ಯಾಕೆ? ಯಾಕೆ ದುಃಖ?
ಯೇಸುವು
ಬಂದನು
ಆತ ನಮ್ಮ ಸುಖ.
ಆತಗುಂಟು ಘನಪೀಠ
ನಮಗೆ ಇಟ್ಟದೆ
ಮಹಿಮೇ ಕಿರೀಟ.

Verse 2

ಹುಟ್ಟುವಾಗ ಏನು ತಂದೆ?
ಕೂಸಿಗೆ ಏನದೆ?
ಬತ್ತಲಾಗಿ ಬಂದೆ.
ತೀರಿಹೋಗುವಾಗಲೇನು
ಹಿಡಿದು
ಹೊರಟು
ಅಲ್ಲಿ ತೋರಿಸೇನು?

Verse 3

ನಮ್ಮ ಜೀವ ನಮ್ಮದಲ್ಲ
ದೇವರು
ಕೊಟ್ಟದು
ತೆಗೆಯಲ್ಕು ಬಲ್ಲ.
ಆತನಾಜ್ಞೆ ದಿವ್ಯಹಾರ
ಆತನು
ಮಾಡೊದು
ಪರಮೋಪಕಾರ.

Verse 4

ಸ್ವಪ್ನದಂತೆ ಹೊನ್ನು ಹಣ
ಬೊಬ್ಬುಳಿ
ಕಾಣಿಸಿ
ನಿಲ್ಲದೊಂದು ಕ್ಷಣ
ಮಾಯೆ ನರಲೋಕದಲ್ಲಿ.
ಇರುತೆ
ಸತ್ಯವೆ
ಪರಲೋಕದಲ್ಲಿ.

Verse 5

ಬೈದರೇನು ದ್ವೇಷಗಾರ?
ಮೋಕ್ಷವು
ನನ್ನದು
ಮೋಕ್ಷ ತಪ್ಪಿಸಾರ
ಆಸ್ತಿ ಜೀವ ವ್ಯರ್ಥ ಮಾನ
ಹೋದರು
ಹೋಗದು
ನಿತ್ಯ ಸಮಾಧಾನ.

Go to top