Verse 1

ಎಲ್ಲಾ ಠಾವಿನೊಳು ಸುಖ
ನನಗೀಯೊ ನಾಥನು
ಇರಲಾಗಿ ಎನು ದುಃಖ?
ತುಂಬಿರೋದು ಶಾಂತಿಯು
ಶರೀರಾತ್ಮಕಾಶೀರ್ವಾದ
ಕೊಡುತಾನೆ ನಿತ್ಯವು
ಕಷ್ಟ ಬಂದು ಮುತ್ತಿದಾಗ
ಪರಿಹಾರ ಮಾಡೊನು.
ಕಷ್ಟ ಬಂದು ಮುತ್ತಿದಾಗ
ಪರಿಹಾರ ಮಾಡೊನು.

Verse 2

ಎಲ್ಲ ಠಾವಿನೊಳು ಯೇಸು
ಕಾಯುತಾನೆ ನಿಶ್ಚಯ
ಮಾರ್ಗಡೊಂಕು ತೋರೆ ಲೇಸು
ಮಾಡುತಾನೆ ಒಡೆಯ.
ಕಷ್ಟದೊಳ್ ನಿರಂತ್ರ ದಯ
ತೋರಿಸುತ ನಡಿಸಿ
ಅಂತ್ಯದೊಳ್ ನಂಗೀಯ್ವರಾಯ
ಶಾಂತಿ ತನ್ನ ರಾಜ್ಯದಿ.
ಅಂತ್ಯದೊಳ್ ನಂಗೀಯ್ವರಾಯ
ಶಾಂತಿ ತನ್ನ ರಾಜ್ಯದಿ.

Verse 3

ಎಲ್ಲ ಠಾವಿನೊಳಭಯ
ಕೊಟ್ಟು ಕಾಯ್ವ ಕರ್ತನು
ಶಕ್ತಿ ಕುಂದಲು ಸಹಾಯ
ಪಾಲಿಸೋನು ನನಗು.
ಹಸಿದಾಗ ದಿವ್ಯ ಮನ್ನ
ಬಡಿಸೋನು ನನಗೆ
ದಾಹವಾಗೆ ಬುಗ್ಗೆಯನ್ನು
ತೋರಿಸೋನು ದೀನಗೆ.
ದಾಹವಾಗೆ ಬುಗ್ಗೆಯನ್ನು
ತೋರಿಸೋನು ದೀನಗೆ.

Verse 4

ದೀರ್ಘ ಕಷ್ಟ ರೋಗ ನಷ್ಟ
ನನ್ನ ಕಾಡುತಿದ್ದರು
ಪರದಲ್ಲಿ ಭಾಗ್ಯಶ್ರೇಷ್ಠ
ಇಟ್ಟಿದ್ದಾನೆ ನನಗು
ಅಮರತ್ವವುಳ್ಳ ದೇಹ
ಹೊಂದಿ ಸ್ವಂತ ಗೃಹದೊಳ್
ಜಯ ಜಯ ಶ್ರೀಮಸೀಹ
ಎಂದು ಹಾಡ್ವೆ ನಿತ್ಯದೊಳ್.
ಜಯ ಜಯ ಶ್ರೀಮಸೀಹ
ಎಂದು ಹಾಡ್ವೆ ನಿತ್ಯದೊಳ್.

Go to top