Verse 1

ನನ್ನನ್ನು ಕಷ್ಟ ಮುತ್ತಲು
ಪಾದಕ್ಕೆ ಮುಳ್ಳು ನಾಟಲು
ಕರ್ತಾ ನಾ ಧೈರ್ಯ ಬಿಡೆನು
ನೀ ನೆಪ್ಪು ಮಾಡುತಿ.
ನೀ ನೆಪ್ಪು ಮಾಡುತ
ನಿತ್ಯವು ಹತ್ತರ
ಇಪ್ಪಾಗ ಯಾವ ಕುಂದಕ?
ನಾನೇತಕಂಜುವೆ?

Verse 2

ಸಂಸಾರಚಿಂತೆ ಹೆಚ್ಚಲು
ನನ್ನನ್ನು ಕಾಡುತ್ತಿರಲು
ಒಂದನ್ನು ಹ್ಯಾಗು ಬಲ್ಲೆನು
ನೀ ನೆಪ್ಪು ಮಾಡುತಿ.
ನೀ ನೆಪ್ಪು ಮಾಡುತ
ನಿತ್ಯವು ಹತ್ತರ
ಇಪ್ಪಾಗ ಯಾವ ಕುಂದಕ?
ನಾನೇತಕಂಜುವೆ?

Verse 3

ನಾ ಸುಖದುಃಖವೆನ್ನದೆ
ಕಾರ್ಗತ್ತಲಲ್ಲು ಅಂಜದೆ
ಸಂತುಷ್ಟನಾಗಿ ಹಾಡುವೆ
ನೀ ನೆಪ್ಪು ಮಾಡುತಿ.
ನೀ ನೆಪ್ಪು ಮಾಡುತ
ನಿತ್ಯವು ಹತ್ತರ
ಇಪ್ಪಾಗ ಯಾವ ಕುಂದಕ?
ನಾನೇತಕಂಜುವೆ?

Go to top