Verse 1

ಪ್ರಾಣ ದೇವರಲ್ಲಿ
ಆತನೊಲ್ಮೆಯಲ್ಲಿ
ಶಾಂತಿ ಹೊಂದುತೆ.
ಆತ ದೊರೆಯಾಗಿ
ಎಲ್ಲ ಆಳಲಾಗಿ
ಹೃತ್ತು ತುಂಬುತೆ
ದಿವಕೆ
ಪ್ರಯಾಣವೆ
ಯೇಸುವೆನ್ನ ಬಿಡೊದಿಲ್ಲ
ನಂಗೆ ಚಿಂತೆ ಇಲ್ಲ.

Verse 2

ದೇವರೈಕ್ಯದಲ್ಲಿ
ಇರ ಹೃತ್ತಿನಲ್ಲಿ
ಮುಖ್ಯ ಆಶೆಯೇ
ನನ್ನ ಪುಣ್ಯಕರ್ಮ
ನನ್ನ ನೀತಿಧರ್ಮ
ದೇವರೈಕ್ಯವೇ.
ಲೋಕದ
ಮಿಥ್ಯಾನಂದ
ಪರರರ್ಸಿಕೊಳ್ಳುತಾರೆ
ನಾನು ಬಯ್ಸಲಾರೆ.

Verse 3

ಸರ್ವಲೋಕದಲ್ಲಿ
ಏಕ ಪತಿಯಲ್ಲಿ
ಮೋಹಗೊಂಡೆನು
ನನ್ನ ಯೋಗಧ್ಯಾನ
ನನ್ನ ಪ್ರಾಣ ಸ್ಥಾನ
ಇಷ್ಟ ಯೇಸುವು.
ಯೇಸುವೇ
ಪ್ರಾಣೇಶನೇ
ನಿನ್ನ ಪ್ರಿಯ ಅಕ್ಷಿಕಾಂತಿ
ನಂಗೆ ಪ್ರಾಣಶಾಂತಿ.

Verse 4

ಪೂರ್ಣ ಧೈರ್ಯದಲ್ಲಿ
ತಂದೆಯೆದೆಯಲ್ಲಿ
ಮಗ ಮಲಗು.
ಆತ್ಮದನ್ನಪಾನ
ದೊಡ್ಡ ಸಮಾಧಾನ
ತಂದೆ ಈಯ್ವನು.
ತಾಯಿಯ
ಕಟಾಕ್ಷವ
ಕಾಣ್ಬ ಮೊಲೆಮಗುವಾಗಿ
ಬಾಳು ಸುಖಿಯಾಗಿ.

Verse 5

ನಿನ್ನ ಎದೆಗಂಬು
ತಾಗಲಾಗಿ ನಂಬು
ಯೇಸು ವೈದ್ಯನು.
ಶತ್ರುಭಯ ಬಿಡು.
ಬೀಳೆ ಮೊರೆ ಇಡು
ಕರ್ತ ಸಲುಹು
ನಂಬಿಕೆ
ತುಂಬಿದ್ದರೆ
ಮಧ್ಯ ಕಷ್ಟವೆಲ್ಲ ತಾಳ್ವಿ
ಕಡೆಯಲ್ಲಿ ಬಾಳ್ವಿ.

Verse 6

ಆಮೆನ್ ಯೇಸುವಲ್ಲಿ
ನಂಬಿದವರಲ್ಲಿ
ಯಾರು ಕೆಟ್ಟರು?
ದೇವ ಮಕ್ಕಳನ್ನು
ಕೊಲ್ಲೊ ಹೊರೆಯನ್ನು
ಹೊರಲೀಸನು.
ತಾಳ್ದರೆ
ಸೋತ್ಹೋಗದೆ
ಗೆದ್ದು ತಂದೆಮನೆಗ್ಹೋಗಿ
ಆದಿ ಸುಖಭೋಗಿ.

Go to top