Verse 1

ಸದಾ ಸುಚಿತ್ತವಾಗಿದೆ
ದಯಾಳು ದೇವಚಿತ್ತ.
ಸಂತೋಷವಾಗಿ ಬಾಳುವೆ
ಕ್ರಿಸ್ತ್ಯೇಸು ನಿನ್ ನಿಮಿತ್ತ.
ಆ ಲೊಕದಿ
ಪ್ರವೇಶಿಸಿ
ಮರ್ತೆಲ್ಲ ಕಷ್ಟ ಬೇನೆ
ವಿಮುಕ್ತನಾಗುತೇನೆ.

Verse 2

ಸದಾ ಸುದಾನವಾಗಿದೆ
ದಯಾಳು ದೇವದಾನ.
ಈ ಪಾಪವೆಂಬ ರೋಗಕೆ
ಅಸಹ್ಯವಾದ ಪಾನ
ಬೇಕದರೆ
ನಾ ಕುಡಿಪೆ
ಕ್ರಿಸ್ತ್ಯೇಸುವಿನ ರಕ್ತ
ಸುಕ್ಷೇಮ ಕೊಡ ಶಕ್ತ.

Verse 3

ಸದಾ ಸುಶಿಕ್ಷೆಯಾಗಿದೆ
ದಯಾಳು ದೇವಶಿಕ್ಷೆ.
ನಮ್ಮಾತ್ಮಗುಣಸ್ಥಿತಿಗೆ
ಉಂಟಾಗಲೈ ಪರೀಕ್ಷೆ.
ನನ್ನಪ್ಪನೆ
ನೀ ದಂಡಣೆ
ಕೊಟ್ಟಾಗ್ಯು ತಾಳುತೇನೆ
ಕೃತಜ್ಞನಾಗಿದ್ದೇನೆ.

Verse 4

ಸನ್ಮಾರ್ಗದಲ್ಲಿ ಭಕ್ತನು
ಸಂಚರಿಸುತ್ತಿದ್ದಾನೆ
ಆದೀಲಿ ಕತ್ತಲಿದ್ದರು
ಕಡೇಲಿ ನೋಡುತಾನೆ
ಮಹಾ ಪ್ರಭೆ
ನನ್ನಾತ್ಮವೆ
ಸಂದೇಹವೆಲ್ಲ ಬಿಡು
ಸದಾ ವಿಶ್ವಾಸವಿಡು.a

Go to top