Verse 1

ನೀ ಕೊಟ್ಟ ಎಲ್ಲ ಸುಖವ
ನಾನುಂಡೆ ಕರ್ತನೆ
ನೀನೀಯುವಷ್ಟು ದುಃಖವ
ನಾನೀಗ ತಾಳುವೆ.

Verse 2

ನಾ ಗೈದ ಪಾಪರಾಶಿಗೆ
ನೀ ಗೈವ ಶಿಕ್ಷೆಯು
ವಿನಾಶ ಮಾಡದೆನಗೆ
ಸಂರಕ್ಷೆ ಮಾತ್ರವು.

Verse 3

ಮನುಷ್ಯರಲ್ಲಿ ನಂಬಿಕೆ
ನಾನಿಡೆನೆಂದಿಗು
ಐ ನಿನ್ನ ಹಸ್ತದಲ್ಲಿಯೆ
ಸುಭದ್ರನಿರ್ವೆನು.

Verse 4

ಸುಬುದ್ಧಿ ನೀತಿವಂತಿಕೆ
ಸುಮಾರ್ಗಕ್ಕೊಯ್ಯವು
ಚುಕ್ಕಾಣೆ ಹಿಡಿ ಕ್ರಿಸ್ತನೇ
ನನ್ ನಾವೆ ದಾಟಿಸು.

Verse 5

ನೆಪ್ಪಾಗಿ ನನ್ನ ಪಾಪವು
ಸಂತಾಪ ಹುಟ್ಟಲು
ನಿನ್ನೆಲ್ಲ ಪಾಪ ಬಿಟ್ಟೆನು
ಎಂದ್ಹೇಳಿ ಸಲಹು.

Verse 6

ಸಂಪೂರ್ಣ ಕ್ಷಮೆ ಮಾಡುವಿ
ಯಥಾರ್ಥ ಪಾಪಿಗೆ
ಎಲ್ಲೆಲ್ಲು ಸಾರಲ್ಪಡಲಿ
ಈ ಶುಭ ಬೋಧನೆ.

Verse 7

ಈ ವಾಕ್ಯ ಓದಿ ಕೇಳಿದೆ
ಈ ವಾಕ್ಯ ಹಿಡಿದು
ನಾ ಭರವಸ ಮಾಡುವೆ
ಎನ್ ಮೃತಿಯಲ್ಲಿಯು.

Verse 8

ದಾರಿದ್ರ್ಯ ರೋಗ ಬಂದರೆ
ನಂಗೇಕೆ ಚಿಂತೆಯು?
ನನ್ನೊಳ್ಲೆ ತಂದೆ ದೇವರೆ
ಇದ್ಧಾನೆ ನಿತ್ಯವು.

Verse 9

ನಿನ್ನಾತುಕೊಂಡ ಭಕ್ತಗೆ
ಕೇಡೇನೂ ತಟ್ಟದು
ನೀನೆನ್ನ ಬಂಡೆ ದುರ್ಗವೆ
ಸುಭದ್ರಾಶಯವು.

Verse 10

ನೀ ಬಾ ನಾನಿರುವಲ್ಲಿಗೆ
ಎಂಬಂಥ ಅಪ್ಪಣೆ
ನಿನ್ನಿಂದ ಬರ್ವ ವರೆಗೆ
ನಾನಿಲ್ಲಿ ಕಾಯುವೆ.

Verse 11

ಹೀಗಿದ್ದು ನಾ ಕೈಕೊಂಬೆನು
ನಿನ್ನಾಜ್ಞೆ ನಿತ್ಯವು
ದೇಹಾತ್ಮಕ್ಕೆಲ್ಲ ಸೌಖ್ಯವು
ನಿನ್ನಂದ ಬಪ್ಪುದು.

Go to top