Verse 1

ಕರ್ತಾ ಅಪೂರ್ವವಾದ ಮಾರ್ಗದಿಂದ
ಸ್ವಜನರಂ ಪರೀಕ್ಷೆ ಮಾಡುತಿ.
ಹ್ಯಾಗಾದರೂ ಸಂಪೂರ್ಣ ಪ್ರೀತಿಯಿಂದ
ಸ್ವಪ್ರಜೆಯನ್ನು ಕಾಯುತಿರುವಿ.
ನಿನ್ನನ್ನು ನಂಬುವಂಥ ದಾಸಗೆ
ಡೊಂಕಾದ ಮಾರ್ಗ ನೆಟ್ಟಗಹುದು
ಆರಂಭದಲ್ಲಿ ಕತ್ತಲಿದ್ದರು
ಕಡೇಲಿ ಎಲ್ಲ ಬೆಳಕಾಗುತೆ.

Verse 2

ಮನುಷ್ಯಬುದ್ಧಿ ಕಲ್ಪಿತಂಗಳನ್ನು
ಅನೇಕಾ ಸಾರಿ ಹೀನ ಮಾಡುವಿ.
ನಮ್ಮಿಂದಲಾಗದಂಥ ಕೃತ್ಯವನ್ನು
ನೀನೊಂದು ಕ್ಷಣದಲ್ಲಿ ತೀರ್ಚುತಿ.
ಮಣ್ಣಾದ ನೀಚರನ್ನು ಎಬ್ಬಿಸಿ
ಭೂರಾಜರಲ್ಲಿ ಕೂಡ್ರ ಮಾಡಲು
ಗರ್ವಿಷ್ಠನನ್ನು ಬೇಗ ಹಿಡಿದು
ಸ್ವಪೀಠದಿಂದ ತಳ್ಳಿ ಬಿಡುತಿ.

Verse 3

ನಾವೋ ವಿವೇಕಹೀನರೆಂಬದನ್ನು
ಚನ್ನಾಗಿ ತಿಳಿದಾತನಿರುತ್ತೀ
ಅಬಲರಾಗಿ ಬೀಳುವ ನಮ್ಮನ್ನು
ಮಮತೆಯಿಂದ ಎತ್ತಿಹೊರುತ್ತೀ.
ನೀ ನಮ್ಮನ್ನೊಮ್ಮೆ ತಂದೇ ಬೆತ್ತದಿ
ಇನ್ನೊಮ್ಮೆ ತಾಯಿ ಮುದ್ದಿನಿಂದಲೇ
ಮುಂದೊಯ್ದು ನಿನ್ನ ಮಾರ್ಗದಲ್ಲಿಯೇ
ನೀನಿರುವಲ್ಲಿ ನಮ್ಮನ್ನೊಯ್ಯುವಿ.

Verse 4

ನಮ್ಮಪ್ಪಾ ನಿನ್ನ ಪ್ರೀತಿಚಿತ್ತದಿಂದ
ನನ್ನನ್ನು ಮಗುವೆಂತ ನಡಿಸೋ.
ದಿವ್ಯಾತ್ಮನೇ ಸುಶಾಂತ ಕಾಂತಿಯಿಂದ
ನನ್ನಲ್ಲಿ ನಿತ್ಯ ವಾಸಾವಾಗಿರೋ.
ನಂಗಾಗಿ ಮೃತಪಟ್ಟ ಯೇಸುವೇ
ನಿನ್ನಿಂದ ಅಪಜಯವಾದೆನು
ಅನಂತ ಪ್ರೀತಿ ನನ್ನ ಜೈಸಿತು
ನಿರಂತ್ರ ನಾನು ನಿನ್ನ ದಾಸನೇ.

Go to top