Verse 1

ನನ್ನೊಂದಿಗೀಶನಿರೆ
ವಿರೋಧಿ ಯಾವನು?
ನಾ ಮೊರೆಯಿಡುತ್ತಿರೆ
ದುರ್ವೈರಿ ಸೈನ್ಯವು
ಸೋಲೋದು ಕ್ಷಣದಲ್ಲಿ.
ಸರ್ವೇಶನಾಪ್ತನು
ತುಫಾನು ಇರುವಲ್ಲಿ
ಸುಶಾಂತನಹನು.

Verse 2

ನಾನೂರಿ ನಿಲ್ಲೋ ಬಂಡೆ
ಕ್ರಿಸ್ತ್ಯೇಸು ಕ್ರೂಜೆಯು
ಐಶ್ವರ್ಯನಿಧಿ ಕಂಡೆ
ನಾನಿನ್ನು ಧನ್ಯನು.
ಒಳ್ಳೇವ ನಾನು ಅಲ್ಲ
ಕ್ರಿಸ್ತ್ಯೇಸು ಒಬ್ಬನೇ.
ಆ ಯೇಸು ಕೊಡೋದೆಲ್ಲ
ಅಪೇಕ್ಷನೀಯವೇ.

Verse 3

ಕ್ರಸ್ತ್ಯೇಸು ರಕ್ಷಾಮೂರ್ತಿ
ಹೃಚ್ಛುದ್ಧಿ ಮಾಡಿದ
ಕ್ರಸ್ತ್ಯೇಸು ಮಧ್ಯವರ್ತಿ
ಅಂತ್ಯಾಜ್ಞೆ ನೀಗಿದ.
ಕ್ರಿಸ್ತ್ಯೇಸು ರಕ್ತದಿಂದ
ನರ್ಕಾಗ್ನಿ ನೊಂದಿತು.
ಕ್ರಿಸ್ತ್ಯೇಸುಜಯದಿಂದ
ವಿಜಯ ನನಗು.

Verse 4

ನಂಗಿಟ್ಟಿದ್ದಾನೆ ಅಲ್ಲಿ
ಮುಂದಾಗಿ ಸ್ವಾಸ್ತ್ಯವ
ಯುದ್ಧಾಂತ್ಯದಿನದಲ್ಲಿ
ಅದನ್ನು ಕೊಡುವ.
ಉಂಟಿಲ್ಲಿ ಹಿಂಸೆ ಶೋಕ
ಯೇಸು ನಿಮಿತ್ತವು.
ಚಿಂತಿಲ್ಲ ಪರಲೋಕ
ಸೌಭ್ಯಾಗ್ಯ ನನ್ನದು.

Verse 5

ಮನುಷ್ಯ ದೇವದೂತ
ಭೂದಿವಸೈನ್ಯವು
ಪಿಶಾಚಿ ಪ್ರೇತ ಭೂತ
ಇತ್ಯಾದಿ ಬಲವು
ಆ ಪ್ರೇಮಹಸ್ತದಿಂದ
ವಿಯೋಗ ಮಾಡವು.
ಯೇಸು ನಾನಿಂದಿನಿಂದ
ನಿನ್ನವ ನಿತ್ಯಕು.

Verse 6

ಉಲ್ಲಾಸದಿಂದಿದ್ದೇನೆ
ಎಲ್ಲಿನ್ನು ಶೋಕವು?
ಸಂಗೀತ ಹಾಡುತ್ತೇನೆ
ನಂಗಾಯ್ತು ಮೋಕ್ಷವು.
ಆ ದಿವ್ಯ ಸತ್ಯಾದಿತ್ಯ
ಉದಯವಾದನು.
ನನ್ನಾಪ್ತ ಯೇಸು ನಿತ್ಯ
ಆನಂದವೀಯ್ವನು.

Go to top