Verse 1

ಕಾಪಾಡುವವ ದೇವರೇ
ಸಂತೋಷವುಳ್ಳ ಯೋಚನೆ
ನಾನೆಲ್ಲಿ ಹ್ಯಾಗೆ ಇದ್ದರು
ಕಾಪಾಡುವವನಾತನು.
ಕಾಪಾಡುವವ ದೇವರೇ
ತನ್ನ ಸ್ವಹಸ್ತದಿಂದಲೇ.
ಅಧೈರ್ಯ ಬಿಟ್ಟು ನಂಬುವೆ
ಕಾಪಾಡುವವ ದೇವರೇ.

Verse 2

ಒಂದೊಂದು ವೇಳೆ ದುಃಖವು
ಒಂದೊಂದು ವೇಳೆ ಸುಖವು
ಹ್ಯಾಗಿದ್ದರೂ ನಿಶ್ಚಿಂತೆಯೇ
ಕಾಪಾಡುವವನಾತನೆ.
ಕಾಪಾಡುವವ ದೇವರೇ
ತನ್ನ ಸ್ವಹಸ್ತದಿಂದಲೇ.
ಅಧೈರ್ಯ ಬಿಟ್ಟು ನಂಬುವೆ
ಕಾಪಾಡುವವ ದೇವರೇ.

Verse 3

ಏನೇನು ಒದಗಿದರು
ನಾ ಗುಣಗುಟ್ಟಲಾರೆನು
ಯಾವಾಗಲು ಸಂತೃಪ್ತನೇ
ಕಾಪಾಡುವವನಾತನೆ.
ಕಾಪಾಡುವವ ದೇವರೇ
ತನ್ನ ಸ್ವಹಸ್ತದಿಂದಲೇ.
ಅಧೈರ್ಯ ಬಿಟ್ಟು ನಂಬುವೆ
ಕಾಪಾಡುವವ ದೇವರೇ.

Verse 4

ಈ ಜೀವದಂತ್ಯ ಬಂದರೂ
ನಾನಾಚೆ ತೆರಳಿದರು
ನಿರ್ಭಿತನಾಗಿ ದಾಟುವೆ
ಕಾಪಾಡುವವನಾತನೆ.
ಕಾಪಾಡುವವ ದೇವರೇ
ತನ್ನ ಸ್ವಹಸ್ತದಿಂದಲೇ.
ಅಧೈರ್ಯ ಬಿಟ್ಟು ನಂಬುವೆ
ಕಾಪಾಡುವವ ದೇವರೇ.

Go to top