Verse 1

ಇದ್ಧಾನೆ ದೇವರ್ ಆತನು
ನನ್ನಾಪತ್ತೆಲ ಬಲ್ಲ.
ದುಃಖಾಬ್ಧಿಯಲ್ಲಿ ಭೀಳಲು
ಯಾನ್ ಭ್ರಷ್ಟಾನಾಥನಲ್ಲ.
ನಾನತ್ತರೆ
ಕಂಡಿರೆನೆ?
ಆತಂಗೆ ಹೇಳೆ ದಯ
ಇಡೋನು. ಯಾಕೆ ಭಯ?

Verse 2

ಕೇಳಿರುತಾನೆ ದೇವರು
ನಾ ಮೊರೆ ಇಡಲಾಗಿ
ಆಲೈಸುತಾನೆ ಒಲೆದು
ದಯಾಳು ತಂದೆಯಾಗಿ.
ವಿಜ್ಞಾಪನೆ
ಮೇಲೆರಲೆ
ಕಟಾಕ್ಷದಿಂದ ರಾಯ
ನಂಗೀಯುವನ್ ಸಹಾಯ.

Verse 3

ಕಂಡಿರುತಾನೆ ದೇವರು
ಇರ್ಳಾತಗಿರುಳಲ್ಲ.
ಅಗಾಧ ಚಿಂತೆ ಹುಟ್ಟಲು
ಗೋಳಾಡ ತಕ್ಕದಲ್ಲ.
ಕಣ್ಣೊಳಗೆ
ನೀರೇರಲೆ
ಕಂಡದನೊರಸೋನು
ಸಂತೋಷ ಪಡಿಸೋನು.

Verse 4

ಮುಂದೋಗುತಾನೆ ದೇವರು
ನಿಶ್ಚಿಂತನಾಗಿದ್ದೇನೆ.
ಉರ್ಲೊಡ್ಡಲೀ ಪ್ರಪಂಚವು
ನಾ ದಾಟಿ ಹೋಗುತೇನೆ
ಹಾದಿಕ್ಕಟ್ಟೇ
ಎಂತಳಲೇ
ಹೃದ್ಧೈರ್ಯ ಹುಟ್ಟಿಸೋನು
ಕಾಲ್ ಜಾರೆ ಕೈಕೊಡೋನು.

Verse 5

ತಂದೀಯುತಾನೆ ದೇವರು
ಸರ್ವೇಶನುಪಕಾರಿ
ಓ ಪ್ರಾಣ ಹಸಿದಿರಲು
ಬೇಡ್ಯುಣ್ಣು ಸಾಯಲಾರಿ
ಅರಣ್ಯಕೂ
ನಿನ್ನೊಯ್ದರೂ
ದಿನಂಪ್ರತೀಲ್ಯಾಹಾರ
ನಿಂಗೀಯದಿರಲಾರ.

Verse 6

ಒಲ್ದಿರುತಾನೆ ದೇವರು
ಕಣ್ಣುರಿಗಂಜಲೇಕೆ?
ಎದೇಲಿ ನಿತ್ಯ ಪ್ರೀತಿಯು
ಬೇಡ್ ಅಳುಮೋರೆಯೇಕೆ?
ಕ್ರೂಜೇಲಿಯೂ
ತೂಗಿದ್ದರೂ
ಕ್ರಿಸ್ತ್ಯೇಸು ಅಳಲಿಲ್ಲ.
ನೀನೂ ಬಿದ್ದೋಗೊದಿಲ್ಲ.

Verse 7

ಇದ್ಧಾನೆ ದೇವರ್ ಆತನು
ಕಣ್ಕಿವಿಯುಳ್ಳ ತಂದೆ
ಮುಂದ್ಹೋಗುತಾನ್ ಈ ವರೆಗೂ
ನಾ ಸ್ವಸ್ಥವಾಗಿ ಬಂದೆ
ಸಮಸ್ತವ
ತಂದೀಯುವ
ಸತ್ಪ್ರೀತಿ ತೋರಿಸೋನು
ನಿತ್ಯಕ್ಕು ಒಲೆಯೋನು.

Go to top