Verse 1

ದೇವಸಮಾಧಾನ
ನದಿಯಂತೆಯೆ
ಇಷ್ಟ ತೀರ್ಥಪಾನ
ಭಕ್ತರಾತ್ಮಕೆ.
ಎಲ್ಲಾ ಭಯವನ್ನು
ನೀಗಿಸುತ್ತದೆ
ನವ ಧೈರ್ಯವನ್ನು
ಹುಟ್ಟಿಸುತ್ತದೆ.
ದೇವಕೃಪಾನಿಧಿ
ಸುಖಪೂರ್ತಿಯು
ಪರಮಾರ್ಥಸಿದ್ಧಿ
ಶಾಂತಿಮೂಲವು.

Verse 2

ದೇವಾಶ್ರಯದಲ್ಲಿ
ಸೇರಿದವನು
ದುರ್ಗದಂತೆ ಅಲ್ಲಿ
ನಿಲ್ಲುವವನು.
ಘೋರ ಬಾಧೆ ಚಿಂತೆ
ಯಾವ ವಿಪತ್ತೂ
ಯೇಸುಭಕ್ತರಿಂಗೆ
ತಟ್ಟಲಾರವು.
ದೇವಕೃಪಾನಿಧಿ
ಸುಖಪೂರ್ತಿಯು
ಪರಮಾರ್ಥಸಿದ್ಧಿ
ಶಾಂತಿಮೂಲವು.

Verse 3

ಸುಕದುಃಖವೆಲ್ಲ
ಆತನಿಂದಲೇ
ಶಿಕ್ಷೆ ರಕ್ಷೆಗೆಲ್ಲ
ಮೂಲ ಪ್ರೀತಿಯೇ.
ನಂಬು ಆತನನ್ನು
ಸತ್ಯಸಂಧನು
ನಿನ್ನ ಕಾರ್ಯವನ್ನು
ನಡಿಸುವನು.
ದೇವಕೃಪಾನಿಧಿ
ಸುಖಪೂರ್ತಿಯು
ಪರಮಾರ್ಥಸಿದ್ಧಿ
ಶಾಂತಿಮೂಲವು.

Go to top