Verse 1

ಈ ವ್ಯರ್ಥ ಚಿಂತೆ ಬಿಟ್ಟು
ವಿಶ್ವಾಸ ನಿತ್ಯವು
ಸರ್ವೇಶನಲ್ಲಿ ಇಟ್ಟು
ನಿರ್ಭೀತನಾಗಿರು.
ಸಮಸ್ತ ಲೋಕವನ್ನು
ತಾನಾಳ್ವ ದೇವರು
ವಿಧೇಯ ಭಕ್ತನನ್ನು
ಸಂರಕ್ಷೆ ಮಾಡೋನು.

Verse 2

ಪಾಪಾತ್ಮ ದೇವರಲ್ಲಿ
ವಿಶ್ವಾಸವಿರಿಸು
ಜಗತ್ತು ಆತನಲ್ಲಿ
ಸಂತೃಪ್ತವಹುದು.
ಸಹಸ್ರ ಚಿಂತೆಯಿಂದ
ನಿಂಗೇನು ಲಾಭವು?
ವಿಶ್ವಾಸ ಮಾತ್ರದಿಂದ
ಸಮಸ್ತ ನಿನ್ನದು.

Verse 3

ಪಿತಾ ಸುನೀತಿಯನ್ನು
ನಮ್ಮಲ್ಲಿ ಬೆಳಿಸು.
ಅಸಹ್ಯ ಮಲವನ್ನು
ಸಂಪೂರ್ಣ ತೆಗೆದು
ಕೊಡೈ ವಿಶ್ರಾಂತಿಯನ್ನು
ಭಯಸ್ಥ ಭಕ್ತಗೆ
ಈಯ್ ನಿನ್ನ ಪ್ರೀತಿಯನ್ನು
ವಿರುದ್ಧ ಮನಕೆ.

Verse 4

ನಿನ್ನಲ್ಲಿ ಶುದ್ಧ ನೀತಿ
ನಿನ್ನಲ್ಲಿ ಬೆಳಕು
ನಿನ್ನಲ್ಲಿ ಸತ್ಯ ಪ್ರೀತಿ
ನಿನ್ನಲ್ಲಿ ತ್ರಾಣವು.
ಶತ್ರುಂಗಳೆಲ್ಲರನ್ನು
ವಿನಾಶ ಮಾಡುವಿ
ಅನಂತ ಸುಖವನ್ನು
ವಿಶ್ವಾಸಿಗೀಯುತಿ.

Go to top