Verse 1

ಶೋಕಾರ್ತನಾದ ಭಕ್ತ
ನಿನ್ನೆಲ್ಲ ಬೇಸರು
ಯೆಹೋವ ಸರ್ವಶಕ್ತ
ಎಂಬಾತಗೊಪ್ಪಿಸು.
ಈ ವಿಶ್ವದಧಿಕಾರಿ
ಚಂದ್ರಾದಿ ಸಾಗಿಸೆ
ನಿನ್ನಡಿಗೊಂದು ದಾರಿ
ಇನ್ನುಂಟುಮಾಡನೆ?

Verse 2

ಯೆಹೋವನ ಔದಾರ್ಯ
ನೀ ನಂಬಿದಾದರೆ
ನಿನ್ನಾಯು ನಿನ್ನ ಕಾರ್ಯ
ಸಫಲವಾಗದೆ?
ಅಪತ್ತಿನೋಳ್ ಗೋಳಾಟ
ಯಾತಕ್ಕೆ? ಆತನು
ನೀಗ್ಯಾನು ನಿನ್ನ ಕಾಟ
ನೀ ನಂಬಿ ಪ್ರಾರ್ಥಿಸು.

Verse 3

ಸರ್ವೇಶ ದಯೆಯಿಂದ
ನಿನ್ಹಿತ ಯೋಜಿಸಿ
ಅಶೋಧ್ಯ ಜ್ಞಾನದಿಂದ
ಸಂಕಲ್ಪ ಪೂರಿಸಿ
ಸುಪಿತ ಮಕ್ಕಳಿಂಗೆ
ಎಂಬಂತೆ ಸರ್ವದಾ
ಒಬ್ಬೊಬ್ಬ ನರನಿಂಗೆ
ಹಿತಾರ್ಥ ಕೊಡುವ.

Verse 4

ಸೈತಾನನುಗ್ರದಿಂದ
ದಂಡೆತ್ತಿ ಬಂದರು
ಯೆಹೋವನಸ್ತ್ರದಿಂದ
ವಿನಾಶವಾಗೊನು.
ಸರ್ವೇಶ ಶತ್ರುವಿಂಗೆ
ಹಿಮ್ಮೆಟ್ಟಿ ಹೋದಾನೇ?
ಅನಾದಿ ಯಶಸಿಂಗೆ
ಕಲಂಕ ಹತ್ತೀತೇ?

Verse 5

ಕ್ರಿಸ್ತ್ಯೇಸುಭಕ್ತ ಕೋರು
ಕೋರೆದೆಗುಂದದೆ
ಇನ್ನಲ್ಪ ಕಾಲ ಹೋರು
ತಾಳೆಲ್ಲ ವೇದನೆ.
ಯೆಹೋವ ನಿನ್ನ ಕಷ್ಟ
ಚೆನ್ನಾಗಿ ಬಲ್ಲನು
ಸಕಾಲದಲ್ಲಿ ನಷ್ಟ
ನಿವಾರಿಸುವನು.

Verse 6

ನೀ ನಂಬಿಗಸ್ತನಾಗಿ
ಹೊರಾಟ ನಡಿಸೆ
ನಿನ್ನಾರತಿ ಚೆನ್ನಾಗಿ
ಪ್ರಕಾಶಿಸಿದರೆ
ನೀ ಕೊರದ ಸಮಯ
ನಿನ್ ನೊಗ ಬಿಜ್ಜೋನು
ಆಗೆಲ್ಲ ತಾಪತ್ರಯ
ಒಮ್ಮೇಲೆ ನಿಲ್ಲೊದು.

Verse 7

ಮತ್ತಾತ ತನ್ನ ಪೀಠ
ಬಿಟ್ಟೆದ್ದು ಹರ್ಷದಿ
ನಿನ್ ಮಂಡೆಗೆ ಕಿರೀಟ
ನಿನ್ ಕೈಗೆ ಕಿನ್ನರಿ
ಇತ್ತಾಗ ನಿನಗಲ್ಲಿ
ಇನ್ನೆಪ್ಪು ಆದೀತೆ
ಈ ಗೋಳುಕೊಳ್ಳದಲ್ಲಿ
ನೀ ತಾಳ್ದ ವೇದನೆ?

Verse 8

ಸ್ವರ್ಗೀಯ ಯಜಮಾನ
ಆಶ್ಚರ್ಯ ಪ್ರಭುವೆ
ಸ್ವೀಕರಿಸೆಮ್ಮ ಗಾನ
ಕೇಳೆಮ್ಮ ಪ್ರಾರ್ಥನೆ
ಇಡೀ ಭೂಯಾತ್ರೆಯಲ್ಲಿ
ನೀನೆಮಗೊಲಿದು
ಬಿಡಾರ ಬಿಡುವಲ್ಲಿ
ನಿನ್ನೈಕ್ಯಕೇರಿಸು.

Go to top