Verse 1

ವಿಶ್ವಾಸವಿಟ್ಟು ದೇವರಲ್ಲಿ
ಆತಂಗೆ ಎಲ್ಲ ಒಪ್ಪಿಸು.
ನಿನ್ನನ್ನು ಎಲ್ಲ ಕಷ್ಟದಲ್ಲಿ
ಆಶ್ಚರ್ಯವಾಗಿ ಕಾಯ್ವನು.
ಈ ಬಂಡೆ ಮೇಲೆ ಮನೆಯು
ಕಟ್ಟಿದ್ದರೆಂದು ಬೀಳದು.

Verse 2

ಅಘೋರ ಚಿಂತೆಯಿಂದ ಏನು
ಶೋಕಾರ್ತವಾದ ಮನವೆ?
ನಾವನುದಿನ ಅತ್ತರೇನು?
ಈ ಶೋಕವೆಲ್ಲ ಯಾತಕೆ?
ಈ ರೀತಿ ಕಷ್ಟಭಾರವು
ಮತ್ತಷ್ಟು ಹೆಚ ಅಹುದು.

Verse 3

ನಿನ್ನಾತ್ಮ ನಿತ್ಯ ದೇವರನ್ನು
ನೋಡುತ್ತ ಶಾಂತವಿರಲಿ
ನೀ ನೋಡಿ ಆತನೊಲ್ಮೆಯನ್ನು.
ಕೃತಾರ್ಥನಾಗಿ ಬಾಳುವಿ
ಸ್ವೀಕಾರ ಗೈದ ತಂದೆಯು
ನಿನ್ನಾರ್ತಿಯೆಲ್ಲ ಬಲ್ಲನು.

Verse 4

ಸಹಾಯ ಮಾಡುವದಕಾಗಿ
ಸುಕಾಲವಾತ ಬಲ್ಲನು
ನಾವಾತನನ್ನು ದೃಢವಾಗಿ
ನಂಬೋದು ಮಾತ್ರ ನಮ್ಮದು.
ಕೃಪಾಳು ದೇವ ಫಕ್ಕನೆ
ಬರೋನು ಪ್ರಾಣರಕ್ಷೆಗೆ.

Verse 5

ಸಂಕಷ್ಟದಗ್ನಿಯುರಿಯಲ್ಲಿ
ದೇವ್ರೆನ್ನ ಬಿಟ್ಟನೆಂಬದೂ
ಸೌಭಾಗ್ಯ ಕಾಲ ಮಾತ್ರದಲ್ಲಿ
ಆತನ್ನ ಸ್ತುತಿಸೋಣವೂ
ಬೇಡಂತ್ಯ ನೋಡು ಕಡೆಗೆ
ತೋರೋದು ಹೆಚ್ಚು ಕಡಿಮೆ.

Verse 6

ಶ್ರೀಮಂತರಿಂಗೆ ಬಡತನ
ಸರ್ವೇಶ ಕೊಡಲಾರನೆ?
ದರಿದ್ರರಿಂಗೆ ಬಹು ಧನ
ಕೊಡೋದಾತಂಗೆ ದೊಡ್ಡದೇ?
ಒಬ್ಬನ್ನ ಎತ್ತಿ ಕೆಳಗೆ
ಮತ್ತೊಬ್ಬನನ್ನು ದೊಬ್ಬನೆ?

Verse 7

ನೀ ನಿತ್ಯ ಬೇಡಿ ಹೋರನಾಡಿ
ಸದ್ಭಕ್ತನಾಗಿ ನಡೆದು
ಯೆಹೋವ ದೇವ ಸ್ತೋತ್ರ ಮಾಡಿ
ಆತನ್ನ ನಂಬಿ ಬದುಕು
ವಿಶ್ವಾಸಿಯನ್ನು ದೇವರು
ಎಂದೆಂದೂ ಬಿಡಲಾರನು.

Go to top