Verse 1

ನಿನ್ನ ಹೊರ್ತು ಇರಲಾರೆ
ಪ್ರಾಣಪ್ರಿಯ ಯೇಸುವೆ
ನಿನ್ನ ಮೂಲ್ಯ ರಕ್ತಧಾರೆ
ಜೀವ ಕೊಟ್ಟಿತೆನಗೆ.
ಕ್ಷಣಹೊತ್ತು ನಿನ್ನ ಐಕ್ಯ
ನಂಗೆ ತಪ್ಪಿ ಹೋದರೆ
ಪ್ರಾಣಕ್ಕಿಲ್ಲ ನಿಜ ಸೌಖ್ಯ
ದುಃಖಾಕ್ರಾಂತನಾಗುವೆ.

Verse 2

ನಿನ್ನ ಹೊರ್ತು ಗೆಲ್ಲಲಾರೆ
ನನ್ನಲ್ಲಿಲ್ಲ ತ್ರಾಣವು.
ಎದೆಗೊಟ್ಟು ನಿಲ್ಲಲಾರೆ
ಶತ್ರು ಮೇಲೆ ಬೀಳಲು.
ನನ್ನ ಹಳೆ ದುಃಸ್ವಾಭಾವ
ಪೂರಾ ನನ್ನ ಗೆಲಿತು.
ಭ್ರಷ್ಟ ಮಾಡಿ ನನ್ನ ಜೀವ
ನಿಂಗೆ ದೂರ ಮಾಡಿತು.

Verse 3

ನಿನ್ನ ಹೊರ್ತು ಮಾಡಲಾರೆ
ನಿನ್ನ ನ್ಯಾಯ ನೀತಿಯ
ನಾ ಸತ್ಕಾರ್ಯ ಗೈಯಲಾರೆ
ನೀನು ಇದ್ದ ವಿನಹ.
ಉಪಕಾರ ದಯ ನೀತಿ
ಎಲ್ಲಾ ಒಳ್ಳೆ ಕ್ರಿಯೆಯು
ಕನಿಕರವುಳ್ಳ ಪ್ರೀತಿ
ನಿನ್ನ ಹೊರ್ತು ಹುಟ್ಟವು.

Verse 4

ನಿನ್ನ ಹೊರ್ತು ಕೊಡಲಾರೆ
ಇಷ್ಟಫಲ ನಿನಗೆ
ಇಲ್ಲದಿರೆ ಆತ್ಮಧಾರೆ
ನನ್ನ ಆತ್ಮದೊಳಗೆ
ನನ್ನಲ್ಲಿಲ್ಲ ಸತ್ವತ್ರಾಣ
ಆತ್ಮಜೀವ ಬೆಳಕು.
ನೀನೆ ಇದ್ದು ನನ್ನ ಪ್ರಾಣ
ಪುನರ್ಜೀವ ಪಡಿಸು.

Verse 5

ನಿನ್ನ ಹೊರ್ತು ಸಾಗಲಾರೆ
ಮುಂದಿನಾ ಪ್ರಯಾಣದೊಳ್
ಗುರಿಗೆಂದೂ ಮುಟ್ಟಲಾರೆ
ಸೋತು ಯಾತ್ರಾಕಷ್ಟದೊಳ್.
ಮುಂದೆ ನಡೆ ಪ್ರಿಯ ಸ್ವಾಮಿ
ತೋರು ನಿನ್ನ ಹೆಜ್ಜೆಯ
ಕ್ಷಣ ಕ್ಷಣ ನಿನ್ನ ವಾಣಿ
ಕೇಳಲೀಸು ಒಡೆಯ.

Verse 6

ನಿನ್ನ ಹೊರ್ತು ಪಡಲಾರೆ
ಮನದೊಳ್ ಉಲ್ಲಾಸವ.
ಶಾಂತಿ ಎಂದೂ ಹೊಂದಲಾರೆ
ನಿನ್ನ ಹೊರ್ತು ವ್ಯಾಕುಲ.
ಮನೆ ತುಂಬ ಲೋಕದರ್ಥ
ಹೊನ್ನು ಹಣವಿದ್ದರು       
ಇಹದರ್ಥ ಪೂರಾ ವ್ಯರ್ಥ
ಏನೂ ಭಾಗ್ಯವೀಯವು.

Verse 7

ನಿನ್ನ ಹೊರ್ತು ಸಾಯಲಾರೆ
ಜೀವದಂತ್ಯ ಕಾಲಕೆ
ಮೃತ್ಯುನದಿ ದಾಟಲಾರೆ
ನಿನ್ನ ಐಕ್ಯವಿಲ್ಲದೆ.
ಅಂತ್ಯಶ್ವಾಸ ಹೋಗುವಾಗ
ಹತ್ರವಿರು ಯೇಸುವೆ
ಚಾಚಿ ನಿನ್ನ ಹಸ್ತ ಬೇಗ
ವೈ ನನ್ನನ್ನು ಮೇಲಕೆ.

Go to top