Verse 1

ನಡಿಸೆನ್ನ ಯೇಸು ಕರ್ತ
ಲೋಕಾರಣ್ಯ ಯಾತ್ರೆಯೊಳ್.
ನೀನೆ ಶಕ್ತ ನಾನಶಕ್ತ
ದಾಟಿಸೈ ಸ್ವಹಸ್ತದೊಳ್.
ಜೀವದನ್ನ ತಿನಿಸೆನ್ನ
ಪೂರ್ಣ ತೃಪ್ತಿಗೊಳಿಸು.

Verse 2

ಜೀವಜಲನಿಧಿಯಿಂದ
ನೀಗು ನನ್ನ ತೃಷೆಯ.
ಅಗ್ನಿಮೇಘಸ್ತಂಭದಿಂದ
ತೋರು ನನ್ನ ಮಾರ್ಗವ.
ನೀ ಸಮರ್ಥ ರಕ್ಷಾಕರ್ತ
ನೀನೆ ಡಾಲೂ ಖೇಡ್ಯವೂ.

Verse 3

ಯೋರ್ದಾನ್ ತೀರದೊಳ್ಗೆನನ್ನ
ಕೈಯೊಳೆತ್ತಿ ಸಲಹು.
ರಕ್ಷೆಗೈದು ಪ್ರಾಣವನ್ನು
ಕನಾನ್ ದೇಶ ಸೇರಿಸು.
ನಿನಗಲ್ಲಿ ನಿತ್ಯದಲ್ಲಿ
ಸ್ತೋತ್ರಗಾನ ಮಾಡ್ವೆನು.

Go to top