Verse 1

ಸಮಿಪ ಬಾ ಸಂರಕ್ಷಕ
ಕೊಡೆಂಗೆ ನಿನ್ನ ಕೈ
ನನ್ನಲ್ಲಿ ನಿಂಗೆ ಹುಟ್ಟಿದ
ನಿನ್ ಪ್ರೇಮ ತೋರಿಸೈ.
ನೀ ಹ್ಯಾಗು ನಂಗೆ ಬೇಕು
ನಿನ್ಹೊರ್ತು ದುಃಖವೆ
ಸೈತಾನ ಬಾಣ ತಾಗಲು
ನಾ ಕೆಟ್ಟೆನಲ್ಲವೇ?

Verse 2

ತುಫಾನು ಎದ್ದ ಸಮಯ
ಇರೆನ್ನ ನಾವೆಯೊಳ್
ನೀ ಸೇರಿಸೆನ್ನ ನಾವೆಯ
ಸುಭದ್ರ ರೇವಿನೊಳ್.
ಮನುಷ್ಯವಾಕ್ಯ ವ್ಯರ್ಥ
ತುಫಾನು ನೀಗಲು
ನಿನ್ನುಕ್ತಿಯೊಂದೆ ಸಾರ್ಥಕ
ನಿನ್ನಲ್ಲೆ ರಕ್ಷೆಯು.

Verse 3

ಸಮಿಪ ಬಾ ಎನ್ ತಾರಕ
ಸುಕಾಲದಲ್ಲಿಯೂ.
ವಿಪತ್ತಿನಿಂದೆನ್ನಾಶೆಯು
ಸಂದ್ಹೋಗೊ ಕಾಲಕೂ
ಅಗತ್ಯ ನಂಗೆ ನೀನೆ
ಇನ್ನಾರು ಇದ್ದರು
ನಿನ್ಹಸ್ತವೆನ್ನ ಬಿಟ್ಟರೆ
ನಾ ತಾಪ್ಪಿ ಹೋಗ್ವೆನು.

Verse 4

ಭೂಯಾತ್ರೆ ತೀರೋ ಮಟ್ಟಿಗು
ಇರೆನ್ನ ಹತ್ರವೆ
ಈ ಜೀವ ಪೋಪ ಕಾಲವು
ಸಮಿಪ ಬಂದರೆ
ಪರ್ದೈಸದೊಳ್ ಪ್ರವೇಶ
ಕೊಡಯ್ಯ ದಾಸಗೆ
ಈ ಪ್ರೀತಿಗಾಗಿ ಶಾಶ್ವತ
ಸಂಸ್ತುತಿ ಹಾಡುವೆ.

Go to top