Verse 1

ದೇಹಿ ದೇಹಿ ಜೀವಪಾನ
ದೇಹಿ ಜೀವರೊಟ್ಟಿಯ.
ದೇಹಿ ದೇಹಿ ಆತ್ಮಸ್ನಾನ
ದೇಹಿ ನೀತಿವಸ್ತ್ರವ.
ದೇಹಿ ಕ್ರೂಜೆವೃಕ್ಷಫಲ
ವಿಷ ತಿಂದ ಪಾಪಿಗೆ.
ದೇಹಿ ಒಂದು ವಾಸಸ್ಥಲ
ಶಾಂತಿಹೀನ ಆತ್ಮಕೆ.

Verse 2

ತ್ರಾಹಿ ತ್ರಾಹಿ ದಿವ್ಯ ಮಿತ್ರ
ತ್ರಾಹಿ ನಾನು ಬಿದ್ದೆನು.
ತ್ರಾಹಿ ತ್ರಾಹಿ ಓ ಪವಿತ್ರ
ತ್ರಾಹಿ ನಾನು ಸತ್ತೆನು.
ತ್ರಾಹಿ ನಿನ್ನ ಶ್ರಮದಿಂದ
ಶಾಂತಿ ನಮಗಾಯಿತು.
ತ್ರಾಹಿ ನಿನ್ನ ಮೃತಿಯಿಂದ
ಹುಟ್ಟಿತೆಮ್ಮ ಜೀವವು.

Verse 3

ಜಯ ಜಯ ಪ್ರಿಯ ಶೂರ
ಜಯ ದೇವಪುತ್ರನೇ.
ಜಯ ಜಯ ನೀತಿಸೂರ
ಜಯ ನಿತ್ಯ ತೇಜನೇ.
ಜಯ ಪರಲೋಕದಿಂದ
ಬಂದ ದಿವ್ಯ ರಕ್ಷಕ.
ಜಯ ನರಲೋಕದಿಂದ
ಮೇಲಕೇರಿದರಸ.

Go to top