Verse 1

ಸ್ವಚಿತ್ತದಿಂದ ನಿನ್ನ ಬಿಟ್ಟು
ಸ್ವಮಾರ್ಗದಲ್ಲಿ ಮನಸಿಟ್ಟು
ನಾ ತಪ್ಪಿಹೋದೆ ನನ್ನನ್ನು
ಕ್ರಿಸ್ತ್ಯೇಸುವೇ ಕಟಾಕ್ಷಿಸು.

Verse 2

ನನ್ನಘರಾಶಿ ಹೆಚ್ಚಲಾಗಿ
ಶ್ರೀ ಯೇಸು ನಿನ್ನ ಘನಕಾಗಿ
ಈ ಭಾರವನ್ನು ನೀಗಿಸು
ನನ್ನಾತ್ಮವನ್ನು ರಕ್ಷಿಸು.

Verse 3

ನಾ ನಿನ್ನ ವಶದಲ್ಲಿದ್ದೇನೆ
ನಿನ್ನಾಳಿಕೆಗೆ ಮೆಚ್ಚುತ್ತೇನೆ
ನಿನ್ನಾಜ್ಞೆ ನನಗಿಷ್ಟವೆ
ಸ್ವಚಿತ್ತವೆಲ್ಲ ಹೋಗಿದೆ.

Verse 4

ನಿನ್ನನ್ನು ಪ್ರೀತಿ ಮಾಡುತ್ತೇನೆ
ಆದಾಗ್ಯೂ ಹೆಚ್ಚು ತಪ್ಪಿದ್ದೇನೆ
ಕ್ರಿಸ್ತ್ಯೇಸು ಸ್ಥಿರ ಪ್ರೀತಿಗು
ನನ್ನನ್ನು ಬಲ ಪಡಿಸು.

Go to top