Verse 1

ಒಂದವಶ್ಯ ಒಂದೆ ಅರ್ಥ
ನನಗೀಗ ತಿಳಿಸು.
ಬೇರೆ ಎಲ್ಲ ಆಶೆ ವ್ಯರ್ಥ
ಬೇರೆ ಸುಖವಿರದು.
ಸಂಸಾರದ ಭೋಗವು ಆತ್ಮಕೆ ಶೋಕ
ಸಂಪೂರ್ಣ ಸಂತೋಷವ ನೀಯದು ಲೋಕ.
ಅ ಉತ್ತಮ ದಾನವು ಸಿಕ್ಕಿದರೆ
ನಂಗೊಂದರಲೆಲ್ಲವು ಪ್ರಾಪ್ತಿಸುತೆ.

Verse 2

ಏಕ ಕಾಂಕ್ಷೆಯುಳ್ಳ ಪ್ರಾಣ
ಲೌಕಿಕೆಲ್ಲ ತ್ಯಜಿಸಿ
ಕ್ರಿಸ್ತನಲ್ಲಿ ಸ್ಥಿರ ಧ್ಯಾನ
ಇಟ್ಟುಕೊಂಡು ಇರಲಿ.
ನೀ ಕ್ರಿಸ್ತನೇ ದೇವಮನುಷ್ಯನ ಮೂರ್ತಿ
ನೀನೊಬ್ಬನೇ ಸರ್ವ ಮಹತ್ವದ ಪೂರ್ತಿ
ನೀ ಮಾತ್ರ ಪರಾತ್ಪರ ಅರಸನು
ನೀನೊಬ್ಬನೇ ಗತಿ ನಿರಂತರಕು.

Verse 3

ನಿನ್ನ ಮೆಲೆ ನನ್ನ ಆಶೆ
ಅತಿಪ್ರಿಯ ಯೇಸುವೇ.
ನನ್ನ ನಿತ್ಯ ಅಭಿಲಾಷೆ
ನೀನೆ ದಿವ್ಯ ಮಿತ್ರನೇ.
ಅನೇಕರು ತೊಲಗಿ ಹೋಗಲಿ ಯೇಸು
ನಿನ್ನಲ್ಲಿಯೆ ವಾಸಿಸೊದನಗೆ ಲೇಸು.
ನಿನ್ನಮರ ವಾಕ್ಯದ ಬಂಡೆಯೊಳು
ಸಜ್ಜೀವದ ಬುಗ್ಗೆಯು ಏರುವದು.

Verse 4

ಒಬ್ಬ ದಿವ್ಯ ಯಜಮಾನ
ನಮಗ್ಯೇಸು ಕ್ರಿಸ್ತನು.
ಈತ ಹೇಳುತಿರ್ವ ಜ್ಞಾನ
ಶ್ರೇಷ್ಠ ಆತ್ಮತೃಪ್ತಿಯು.
ಕ್ರಿಸ್ತ್ಯೇಸುವು ಕ್ರೂಜೆಯ ಸೈರಿಸಿದ್ದಾನೆ
ಕ್ರಿಸ್ತ್ಯೇಸು ಮನುಷ್ಯರಿಗೊಲೆಯುತಾನೆ.
ಕ್ರಿಸ್ತ್ಯೇಸು ಸ್ನೇಹವನರಿವುದೆ
ಸರ್ವೋತ್ತಮ ಭಾಗ್ಯವು ಭಕ್ತರಿಗೆ.

Go to top