Verse 1

ಆಗೊದೆಂದು ಐ ಸಹಾಯ?
ಎಂದಿಗೂ
ತೀರದು
ಈ ಪ್ರಪಂಚಮಾಯ
ರಕ್ತ ಸೋರುವಂಥ ಗಾಯ
ಹೊಂದಿದೆ
ಸುಮ್ಮನೆ
ಕಳಕೊಂಡೆ ಪ್ರಾಯ.

Verse 2

ತಾಗಿತೆನಗಾ ಸೈತಾನ
ಬಾಣವು
ಹೋಯಿತು
ಆತ್ಮಸಮಾಧಾನ
ಸಾಯುತೇನೆ ಅನ್ನಪಾನ
ಇಲ್ಲದೆ.
ಕರ್ತನೆ
ಕೊಡು ಒಂದು ದಾನ.

Verse 3

ಕ್ರಿಸ್ತ ನ್ನನ ಜೀವ ಕ್ಷಯ
ಅಹುದು
ಹುಟ್ಟಿತು
ನರಕಾಗ್ನಿಭಯ
ಲೋಕದಾಶೆ ಪೂರ್ಣ ಲಯ
ಕೋರಿಕೆ
ಒಂದದೆ
ಯೇಸು ನಿನ್ನ ದಯ.

Go to top