Verse 1

ಹೃತ್ಪ್ರಿಯನಾದ ಕರ್ತನೆ
ನನ್ನಿಂದ ದೂರವಾಗದೆ
ಬಾ ಬಾ ಸಹಾಯಕಾಗಿ.
ಸದಾ ನಾನೆಲ್ಲಿ ಇದ್ದರು
ಎನೊಂದು ಚಿಂತೆ ಮಾಡೆನು
ನೀ ಕೃಪೆದೋರಲಾಗಿ
ಹೃದ್ಗøಹ ಭಿನ್ನವಾದರು
ನಿನ್ನಲ್ಲಿ ಸುಖಿಯಹೆನು.
ನೀ ನಿನ್ನ ಶುದ್ಧ ರಕ್ತದಿ
ಸಂರಕ್ಷೆ ಸಿದ್ದ ಮಾಡಿದಿ
ಶ್ರೀ ಯೇಸುವೆ
ನಮ್ಮಾಳ್ಮನಾದ ದೇವರೆ
ಸಂರಕ್ಷೆ ಕೊಡು ನನಗೆ.

Verse 2

ಈ ಕೀಳ ಜೀವದೊಳಗೆ
ನಂಗಿರ್ವದೆಲ್ಲ ನಿನ್ನದೆ
ದೇಹಾತ್ಮ ನಿನ್ನ ದಾನ.
ಪರಾರ್ಥಕಾಗೀ ದಾನವ
ಪ್ರಯೋಗಿಸಲ್ಕೆ ಒಡೆಯ
ಕೊಡೆಂಗೆ ತ್ರಾಣ ಜ್ಞಾನ.
ದುರ್ಬೋಧನಾದಿಮೋಸವ
ಸೈತಾನ ತಂತ್ರ ಯುಕ್ತಿಯ
ಹೀನೈಸಿ ಕ್ರೂಜೆ ಹೊರಲು
ನೀನೆನಗುಪದೇಶಿಸು.
ನಾ ಸಾಯಲೆ
ಆಧಾರವನ್ನು ಕ್ರಿಸ್ತನೆ
ನೀ ಕೊಡು ನನ್ನ ಆತ್ಮಕೆ.

Verse 3

ಈ ಲೋಕ ಬಿಟ್ಟು ಹೋಗಲು
ತೀರ್ಪಾಗೊ ದಿನ ವರೆಗು
ಈ ದೇಹ ನಿದ್ದೆಗೆಯ್ಯ
ನೀ ನೇಮಿಸೋಳ್ಳೆ ಸ್ಥಳವ.
ಶ್ರೀ ದೂತರೆನ್ನ ಆತ್ಮವ
ಇಲ್ಲಿಂದ ಬೇಗ ಒಯ್ಯ
ಆಜ್ಞಾಪಿಸೆನ್ನ ಕರ್ತನೆ.
ಕಣ್ಣಾರೆ ನಿನ್ನ ಮಹಿಮೆ
ನನಲ್ಲಿ ನೊಡೂತಿರ್ವೆನು.
ಈ ದೇಹ ಶೀಘ್ರ ಎಬ್ಬಿಸು
ನಾನೆದ್ದರೆ
ನನ್ನಾಪ್ತ ಕರ್ತ ನಿನಗೆ
ಅನಂತ ಸ್ತೋತ್ರ ಮಾಡುವೆ.

Go to top