Verse 1

ಆತ್ಮದ ಶತ್ರುವು ವಂಚನೆಯಿಂದ
ನಮಗೆ ಶೋಧನೆ ಮಾಡುವನು
ಇರುಳು ಹಗಲು ಮೋಸಗಳಿಂದ
ಅವನು ಕಷ್ಟವ ಪಡಿಸಲು
ಯೇಸುವೆ ತ್ರಾಹಿ ಪ್ರಕಾಶವ ಚಲ್ಲಿ
ಸುತ್ತಲು ಮುಚ್ಚುವ ಕತ್ತಲೆಯಲ್ಲಿ.

Verse 2

ನಮಗೆ ಯೌವನಪಾಪಗಳಿಂದ
ಆತ್ಮದ ಸಂಕಟ ಹುಟ್ಟಿರಲು
ನಿನ್ನ ಸಂರಕ್ಷೆಯ ಪೂರ್ಣತೆಯಿಂದ
ಯೇಸುವೆ ಪಾಲಿಸು ಶಾಂತಿಯನು
ಯೇಸುವೆ ತ್ರಾಹಿ ಸಹಾಯಕನಾಗು
ಮೋಕ್ಷದ ಮಾರ್ಗದಿ ನಾಯಕನಾಗು.

Verse 3

ಬಿಡದೆ ನಮಗೆ ಹತ್ತುವ ಪಾಪ
ಸಾವಿರ ವಿಧದ ಆಶೆಗಳು
ನಿತ್ಯದಲೆಬ್ಬಿಸಿ ದೇವರ ಶಾಪ
ಅಧಿಕ ಸಂಕಟ ಪಡಿಸಲು
ಯೆಸುವೆ ತ್ರಾಹಿ ದುರಾಶೆಗಳನ್ನು
ನೊಂದಿಸಿ ಮಾಡು ವಿಮೋಚನೆಯನ್ನು.

Verse 4

ಪ್ರಾರ್ಥನೆ ಮಾಡುವ
ಶಕ್ತಿಯು ಕುಂದೆ
ಎಚ್ಚರ ತಪ್ಪುವ ನಿದ್ದೆಯೊಳು
ಅರ್ಪಿಸು ಯಾಜಕ ದೇವರ ಮುಂದೆ
ನಿನ್ನ ವಿಜ್ಞಾಪನೆಧೂಪವನು
ಯೇಸುವೆ ತ್ರಾಹಿ ನೀನೆಬ್ಬಿಸೆನ್ನನ್ನು
ಕಲಿಸು ಸತ್ಯದಿ ಬೇಡುವದನ್ನು.

Verse 5

ಕೊನೆಯ ಕದನ ಎಸಗುವಲ್ಲಿ
ಮರಣ ಸಂಕಟ ಒದಗಲು
ಬಲವು ದೇಹಪ್ರಾಣಾತ್ಮಗಳಲ್ಲಿ
ಸವೆದು ಸವೆದು ನಿಂತಿರಲು
ಯೇಸುವೆ ತ್ರಾಹಿ ಸಂಪೂರ್ಣ ವಿಜಯ
ನನ್ನೊಳು ಸಿದ್ಧಿಸಿ ನೀಡು ನಿರ್ಭಯ.

Go to top