Verse 1

ನಾ ಕುರಿ ದಾರಿ ತಪ್ಪಿದ್ದೇನೆ
ನೀ ಕ್ರಿಸ್ತ ಒಳ್ಳೆ ಕುರುಬ.
ನನ್ನೆಲ್ಲ ಪಾಪ ಕಷ್ಟ ಬೇನೆ
ನೀ ನೋಡಿ ಬಿಟ್ಟು ದಿವವ
ಈ ನರಲೋಕಕಿಳಿದಿ.
ಸಂಸ್ತುತಿ ನಿನಗಾಗಲಿ.

Verse 2

ಈ ಪಾಪಲೋಕಕಾಡಿನಲ್ಲಿ
ನಾನಲೆದಾಡುತ್ತಿದ್ದೆನು
ಸೈತಾನನಿಟ್ಟ ಬಲೆಯಲ್ಲಿ
ಒದ್ದಾಡಿ ಸಾಯುತಿದ್ದೆನು
ನೀ ನೋಡಿ ಪಟ್ಟು ಕರುಣ
ಪೂರಗಿ ಬಿಚ್ಚಿದೆನ್ನನ.

Verse 3

ಪ್ರಪಂಚವ್ಯವಹಾರದಲ್ಲಿ
ನಂಗೀಯು ನಿನ್ನ ಕಾಂತಿಯ.
ಸಮಸ್ತ ನನ್ನ ಮಾರ್ಗದಲ್ಲಿ
ನೀನಾಗು ನನ್ನ ನಾಯಕ.
ನೀ ಕೊಟ್ಟ ವಾಕ್ಯದಂತೆಯೇ
ಇರೆಂದು ನನ್ನ ಹತ್ರವೇ.

Verse 4

ಕ್ರಿಸ್ತ್ಯೇಸು ಹಣದಾಶೆಯನ್ನು
ವಿನಾಶಿಸೆನ್ನ ಮನದೊಳ್.
ನಿನ್ನತಿಶುದ್ಧ ಮನಸನ್ನ
ನೀ ಹುಟ್ಟಿಸೆನ್ನ ಹೃದದೊಳ್.
ಸಂಪೂರ್ಣ ನಾನು ಹೊಂದಲಿ
ಸಂತೃಪ್ತಿ ಯೇಸು ನಿನ್ನಲ್ಲಿ.

Verse 5

ನೀ ರೂಪಿಸಿದಿ ದೇಹವನ್ನು
ಈ ಭೂಮಿಮಣ್ಣಿನಿಂದಲೇ
ಕುಟುಂಬ ಮಕ್ಕಳೆಲ್ಲರನ್ನು
ನೀ ಕೊಟ್ಟ ಕೃಪೆಯಿಂದಲೇ
ಆಹಾರ ವಸ್ತ್ರ ಉಚಿತ
ಸಿಕ್ಕೋದು ಯೇಸು ಖಚಿತ.

Verse 6

ಎಂದೆಂದು ತಪ್ಪಲಿಲ್ಲವಲ್ಲ
ನೀಕೊಟ್ಟ ದಿವ್ಯ ವಚನ
ನೀನೆಂದು ಬಿಟ್ಟುಬಿಡಲಿಲ್ಲ
ನಿನ್ನನ್ನು ನಂಬಿದಾತನು
ಮತ್ತ್ಯಾಕೆ ಧೈರ್ಯಗೆಡಲಿ
ಈ ಘೋರ ಕಷ್ಟಕೊಳ್ಳದಿ?

Verse 7

ನಿನ್ನಲ್ಲೆ ನಾನು ನಂಬುತೇನೆ
ಸಮಸ್ತ ನನ್ನ ಕಷ್ಟದಿ
ವಿಶ್ವಾಸದಿಂದ ಹಾಕುತೇನೆ
ಶ್ರೀ ಯೇಸು ನಿನ್ನ ವಾಕ್ಯದಿ
ನನ್ನಾತ್ಮನಾವೆಲಂಗರ
ಅಲ್ಲ್ಯೆನ್ನ ನಿತ್ಯ ಆಸರ.

Verse 8

ನಿಂಗೆನ್ನ ಯೇಸು ಸ್ತುತಿ
ಸ್ತೋತ್ರ ಭೂಪರಲೋಕಗಳಲ್ಲಿ.
ನನಾತ್ಮ ದೇಹ ನಿಂಗೆ ಮಾತ್ರ
ಸಂಪೂರ್ಣ ಹೊಂದಿಕೊಳ್ಳಲ್ಲಿ.
ನನ್ನಂತ್ಯತಾಸು ಬರಲೆ
ತಕ್ಕೋ ನನ್ನನ್ನು ನಿನ್ನಲೇ.

Go to top