Verse 1

ಎಂದಿಗೂ ಸಮಿಪವಾದ
ಸರ್ವಬಂಧ ಹರನೆ
ನಿತ್ಯ ಸುಖಪೂರ್ತಿಯಾದ
ಬುಗ್ಗೆ ನೀನೆ ನಮಗೆ.
ಮಾಡಿಬಿಡು ಅಂತ್ಯವನ್ನು
ನಮ್ಮ ಹಳೆ ಬುದ್ಧಿಗೆ
ತಪ್ಪಿಸೆಮ್ಮ ಸೆರೆಯನ್ನು
ಕರುಣಾಬ್ಧಿ ದೇವರೆ.

Verse 2

ತಂದೆ ಕೊಟ್ಟ ಮಂದೆಯಲ್ಲಿ
ಸಾಯದೊಂದೂ ಕುರಿಯು
ಭಕ್ತರೆಲ್ಲ ರಾಜ್ಯದಲ್ಲಿ
ಸೇರಿ ಹರ್ಷಗೊಂಬರು.
ಕಾರ್ಯ ತೀರಿಸೋದಕಾಗಿ
ಶುದ್ಧ ಪ್ರಾಯಶ್ಚಿತ್ತವ
ನಮ್ಮ ಪಾಪಗಳಿಗಾಗಿ
ಯೇಸು ಸತ್ತು ಮಾಡಿದ.

Verse 3

ನಮ್ಮ ಆತ್ಮಸಿದ್ಧಿ ಗೆಯ್ಯ
ನಿನ್ನ ಚಿತ್ತ ಸ್ಥಿರವೆ
ಸುಖನಿಧಿ ನಿನ್ನಲಯ್ಯ
ನೆಲೆಯಾಗಿರುತ್ತದೆ.
ಕ್ರೂಜೆವರ್ತಮಾನಕಾಗಿ
ಲೋಕವೆಲ್ಲ ಬೈದರು
ನೀನು ಮಿತ್ರನಿರಲಾಗಿ
ನಮಗೇನು ಚಿಂತೆಯು?

Verse 4

ನೋಡು ಬಂಧದಲ್ಲಿದ್ದೇವೆ
ನಾವು ನೀಚ ದಾಸರು
ಮೂಲ್ಗಿ ಕೂಗಿ ಬೇಡುತೇವೆ
ನಮ್ಮ ನೊಗ ತಪ್ಪಿಸು.
ಈ ಪ್ರಪಂಚಸೇವೆಯನ್ನು
ಮಾಡೊದೆಷ್ಟೊ ಕಷ್ಟವು
ನಿನ್ನ ಮುಕ್ತಿ ಕಾರ್ಯವನು
ನಮ್ಮಲನುಕೂಲಿಸು.

Verse 5

ನಮ್ಮ ದುಷ್ಟ ವೈರಿಯನ್ನು
ನೀನು ಜೈಸು ಕರ್ತನೆ
ಕೊಡು ಹೊಸ ಬಲವನ್ನು
ಕುಂದಿ ಹೋದ ನಮಗೆ.
ಹೋಗಲೈ ಮನುಷ್ಯಸ್ನೇಹ
ಹೋಗು ನರಭಯವೇ
ಹೊಗಲೈ ಮನಸ್ಸಂದೇಹ
ಹೋಗು ಮಾಂಸಪ್ರೀತಿಯೇ.

Verse 6

ಕರ್ತ ಮುರಿ ಜಜ್ಜು ಕುಟ್ಟು
ಅಂಧಾಕರ ಶಕ್ತಿಯ
ನಿನ್ನ ಪ್ರೀತಿಯಿಂದ ಸುಟ್ಟು
ಹಾಕು ನಮ್ಮ ಪಾಪವ.
ಸರ್ಪಬೀಜವಂ ಬಿಸಾಡು
ಅಗ್ನಿಕುಂಡದೊಳಗೆ
ತಂದೆಮನೆ ಸಿದ್ಧ ಮಾಡು
ಭಕ್ತ ಸಮುದಾಯಕೆ.

Verse 7

ನಮ್ಮ ಮಾಂಸಕುಪಚಾರ
ಇಹದಲ್ಲಿ ಬೇಡವು
ನಿನ್ನ ಚಿತ್ತಕನುಸಾರ
ಮಾತ್ರ ಕರ್ತ ನಡಿಸು.
ನಿನ್ನ ಬಾಯ್ಯ ಸತ್ಯ ಮಾತು
ಪೂರ್ತಿಯಾಗೊ ವರೆಗೆ
ನಮ್ಮ ಆತ್ಮ ನಿನ್ನನಾತು-
ಕೊಂಡು ದೃಢವಾಗಿದೆ.

Verse 8

ರಾಜ ನಿನ್ನ ರಾಜ್ಯವಾಳು
ನಿನ್ನ ಪ್ರಜೆ ಸಲಹು
ಸರ್ವಪ್ರಭುವಾಗಿ ಬಾಳು
ಘನದಿಂದ ನಿತ್ಯವು.
ಭಾರ ಹೊತ್ತು ಒಂದು ದಾನ
ಬೇಡುತೇವೆ ಯೇಸುವೆ
ನಿಜಮುಕ್ತಿವಾಸ ಸ್ಥಾನ
ತೋರ ಮಾಡು ನಮಗೆ.

Verse 9

ಕೊಂಡುಕೊಂಡಿ ಭಕ್ತರನ್ನು
ನೀನಮೂಲ್ಯ ಕ್ರಯಕ್ಕೆ
ನಿನ್ನ ಕ್ರೂಜೆಫಲವನ್ನು
ಕೊಡು ನಿನ್ನ ಸಭೆಗೆ.
ನಿನ್ನ ರೂಪಕವರನ್ನು
ಸರಿಯಾಗಿ ರೂಪಿಸು
ನಿನ್ನ ಆತ್ಮಪೂರ್ತಿಯನ್ನು
ಕೊಟ್ಟು ತೃಪ್ತಿಗೊಳಿಸು.

Verse 10

ಪ್ರೀತಿ ನಿನ್ನ ಸಭ್ಯರನ್ನು
ಕೃಪೆಯಿಂದ ಸಲಹಿ
ಪರದೈಸ ಸುಖವನ್ನು
ಆಂತ್ಯದಲ್ಲಿ ಕೊಡುವಿ.
ಹೊಂದಿ ಜಯಕೀರ್ತಿಯನ್ನು
ನಿನ್ನ ಐಕ್ಯ ಸೇರಲು
ನಾವು ಶುಭ ಸ್ವಪ್ನವನ್ನು
ಕಂಡ ಹಾಗೆ ಇರ್ವೆವು.

Go to top