Verse 1

ಕಟಾಕ್ಷಮೂಲ ಕರ್ತನೆ
ನೀನೆಲ್ಲ ಆಶೆಯು
ಸಮಸ್ತ ಕಷ್ಟದೊಳಗೆ
ನನ್ನನ್ನು ನೆನಸು.

Verse 2

ಅಘೋರ ಪಾಪಭಾರವ
ನಾ ತಾಳಲಾರೆನು
ನೀ ಮನ್ನಿಸೈ ಸುಶಾಂತಿಯ
ಕೊಟ್ಟೆನ್ನ ನೆನಸು.

Verse 3

ಜೀವಾತ್ಮತ್ರಾಣ ಕುಂದುವ
ಸಂಕಷ್ಟ ಹುಟ್ಟಲು
ದಿನಕ್ಕೆ ತಕ್ಕ ಶಕ್ತಿಯ
ಕೊಟ್ಟೆನ್ನ ನೆನಸು.

Verse 4

ಈ ಜಲಹೀನ ದೇಹವ
ರೋಗಾದಿ ತಿನ್ನಲು
ಸಹಾಯ ಶಾಂತಿ ತಾಳ್ಮೆಯ
ಕೊಟ್ಟೆನ್ನ ನೆನಸು.

Verse 5

ನಾ ನಿನಗಾಗಿ ನಿಂದೆಯ
ತಾಳೋವನಾದರು
ಅದೇನು? ನಿನ್ನ ದಾಸನ
ನೀ ಮಾತ್ರ ನೆನಸು.

Verse 6

ಅಘೋರ ಸಾವುಗಳಿಗೆ
ಕಡೇಲಿ ಬರಲು
ನನ್ನನ್ನು ರಕ್ಷಿಸ್ಯೇಸುವೆ
ನೀ ನನ್ನ ನೆನಸು.

Go to top