Verse 1

ಮತ್ತಷ್ಟು ಹತ್ತರ
ನನ್ನ ತಕ್ಕೋ.
ಸುತ್ತಲು ಬಂಧನ
ಬಿಡಿಸಿಕೋ.
ಮುದ್ದಿನಿಂದಾಗಲಿ
ಬೆತ್ತದಿಂದಾಗಲಿ
ಮತ್ತಷ್ಟು ಹತ್ತರ
ಎಳೆದುಕೋ.

Verse 2

ಕಾರ್ಗತ್ತಲಾದರೂ
ಸಾಗುವೆನು.
ಮಾರ್ಗದಿ ನೊಂದರೂ
ಹಾಡುವೆನು.
ನಿಂದೆಯೂ ತೊಂದರೆ
ಬಂದರೆ ಬೇಡುವೆ
ಮತ್ತಷ್ಟು ಹತ್ತರ
ಎಳೆದುಕೋ.

Verse 3

ನಿನ್ನಿಜ್ಛೆ ನಿತ್ಯವು
ಉತ್ತಮವೇ
ತಂದೆಯ ಶಿಕ್ಷೆಯು
ರಕ್ಷಣೆಯೇ
ಕರುಣೆಯೊಂದಿರೆ
ಕುಂದಿಲ್ಲ ನನಗೆ
ಮತ್ತಷ್ಡು ಹತ್ತರ
ಎಳೆದುಕೋ.

Verse 4

ಇಲ್ಲಿಯ ಡಂಭವ
ತ್ಯಜಿಸಿದೆ
ಅಲ್ಲಿಯ ಭಾಗ್ಯವ
ಹಂಬಲಿಪೆ.
ಪಾಲಿಸು ದೇವರೇ
ಲಾಲಿಸೀ ಪ್ರಾರ್ಥನೆ
ಮತ್ತಷ್ಡು ಹತ್ತಿರ
ಎಳೆದುಕೋ.

Go to top