Verse 1

ಈ ಭೂಸಂಚಾರದಲ್ಲಿ
ನಾ ಜಪಿಸುವೆನು
ಸಮಸ್ತ ಸ್ಥಿತಿಯಲ್ಲಿ
ಉದ್ಧರಿಸೆನ್ನನ್ನು.

Verse 2

ನಾ ರಾತ್ರಿ ನಿದ್ದೆ ಮಾಡಿ
ಮುಂಜಾನೆ ಏಳಲು
ಯಾವಾಗಲೂ ಕಾಪಾಡಿ
ಉದ್ಧರಿಸೆನ್ನನ್ನು.

Verse 3

ಉದ್ಯೋಗ ಕಷ್ಟದಲ್ಲು
ನೀ ನಡಿಸೆನ್ನನ್ನು
ಸಂಸಾರಚಿಂತೆಯಲ್ಲೂ
ಉದ್ಧರಿಸೆನ್ನನ್ನು.

Verse 4

ದುರಿಚ್ಛೆ ಆಶೆಯಿಂದ
ಗಂಡಾಂತ್ರವಾಗಲು
ನೀ ಕರ್ತಾ ದಯದಿಂದ
ಉದ್ಧರಿಸೆನ್ನನ್ನು.

Verse 5

ಕಳಂಕ ಪಾಪ ದೋಷ
ನನ್ನಲ್ಲಿ ಕಾಣಲು
ನೀ ತೋರಿಸಾತ್ಮಪೋಷ
ಉದ್ಧರಿಸೆನ್ನನ್ನು.

Verse 6

ನಾ ಧೈರ್ಯಹೀನನಾಗಿ
ಸಂದೇಹ ಪಡಲು
ನಿನ್ನಾತ್ಮಮೂಲವಾಗಿ
ಉದ್ಧರಿಸೆನ್ನನ್ನು.

Verse 7

ನಾ ಕಷ್ಟ ಶ್ರಮೆಯಲ್ಲಿ
ಸುಶಿಕ್ಷೆ ಪಡಲು
ನೀ ನೆನದದರಲ್ಲಿ
ಉದ್ಧರಿಸೆನ್ನನ್ನು.

Verse 8

ಸೈತಾನ ತಂತ್ರದಿಂದ
ನೀ ಕಾಯಿ ನನ್ನನ್ನು
ದುಸ್ಸಂಗವೋಸದಿಂದ
ಉದ್ಧರಿಸೆನ್ನನ್ನು.

Verse 9

ದುರ್ಬದ್ಧಿ ಅವಿವೇಕ
ಮದ್ಯಾಶೆ ಹುಟ್ಟಲು
ಕೊಡೆನಗಭಿಷೇಕ
ಉದ್ಧರಿಸೆನ್ನನ್ನು.

Verse 10

ನಾ ಮೃತಿಗೆದುರಾಗಿ
ನಿನ್ನನ್ನು ಕೂಗಲು
ನಿನ್ನೈದು ಗಾಯಕ್ಕಾಗಿ
ಉದ್ಧರಿಸೆನ್ನನ್ನು.

Go to top