Verse 1

ಕೈ ನೀಡು ಸರ್ವತ್ರಾಣಿ
ಸೋತ್ಹೋಗುತೆ
ಈ ಬಡ ನರಪ್ರಾಣಿ
ತನ್ನಷ್ಟಕೆ.
ಇನ್ನೆನ್ನ ಜೊತೆಯಲ್ಲಿ
ನೀ ಬಂದರೆ
ಸೇರೇನು ಅಂತ್ಯದಲ್ಲಿ
ಸಂಜೀವಕೆ.

Verse 2

ನನ್ನಲ್ಲ ಭಕ್ತಿಯನ್ನು
ಸಂವರ್ಧಿಸು
ಅಸ್ಥಿರ ಚಿತ್ತವನ್ನು
ನೆಲ್ಗೊಳ್ಳಿಸು.
ನಿನ್ನಾತ್ಮ ತಾಣ್ರದಿಂದ
ವಿಜೈಸುವೆ
ಶತ್ರುಂಗಳೆಲ್ಲರಿಂದ
ಪಾರಾಗುವೆ.

Verse 3

ನಾ ಸುಖದುಃಖದಲ್ಲಿ
ನಿನ್ನೊಂದಿಗೆ
ಪ್ರಯಾಣ ಮಾಡಿ ಅಲ್ಲಿ
ವಿಶ್ರಮಿಪೆ.
ಈ ಬಡ ನರಪ್ರಾಣಿ
ಬಿನ್ನೈಸೊದು
ಕೈ ನೀಡು ಸರ್ವತ್ರಾಣಿ
ಐ ದಾಟಿಸು.

Go to top