Verse 1

ಕೈ ಹಿಡಿ ದೇವರೆ
ನೀ ಬಿಡ ಬೇಡ ಅಯ್ಯ.
ನನ್ನನ್ನು ಕಡೆಗೆ
ಸೌಭಾಗ್ಯಕ್ಕೈದಿಸಯ್ಯ.
ಅನಾದಿ ಭಾಸ್ಕರ
ಅನಂತ ಪ್ರೀತಿಯೇ
ಕೃಪಾಳು ಒಡೆಯ
ಕೈ ಹಿಡಿ ದೇವರೇ.

Verse 2

ಕೈ ಹಿಡಿ ದೇವರೇ
ವಿಶ್ವಾಸ ದೃಢವನ್ನು
ನನ್ನಲ್ಲಿ ಹುಟ್ಟಿಸು.
ಭಯಸ್ಥ ಭಕ್ತನನ್ನು
ಸಂತೋಷ ಪಡಿಸು.
ಸಮಸ್ತ ಪಾಪಕೆ
ನೀ ತಪ್ಪಿಸೆನ್ನನ್ನು
ಕೈ ಹಿಡಿ ದೇವರೇ.

Verse 3

ಕೈ ಹಿಡಿ ದೇವರೇ
ಹೃದಂತರಂಗದಿಂದ
ನಾ ಬೇಡಿ ಸುಯ್ಯುವೆ.
ಕಟಾಕ್ಷಪೂರ್ತಿಯಿಂದ
ಸಹಾಯ ಕಳುಹು.
ಸಂಕಷ್ಟಶೋಧನೆ
ನನ್ನನ್ನು ಮುತ್ತಲು
ಕೈ ಹಿಡಿ ದೇವರೇ.

Verse 4

ಕೈ ಹಿಡಿ ದೇವರೇ
ಅಧೀನ ಪುತ್ರನನ್ನು
ನೀ ತಂದೆ ಪಾಲಿಸು.
ನಾ ಗೆಯ್ವ ಕೃತ್ಯವನ್ನು
ಚನ್ನಾಗಿ ಸಾಗಿಸು.
ದಯಾಳು ಪಿತನೇ
ನಂಗೊಲ್ದು ಸಲಹು
ಕೈ ಹಿಡಿ ದೇವರೇ.

Verse 5

ಕೈ ಹಿಡಿ ದೇವರೇ
ಸದ್ಭಕ್ತ ಶೀಲವನ್ನು
ನ್ನನಲ್ಲಿ ನಿರ್ಮಿಸಿ
ಅನಂತ ಮುಕ್ತಿಯನ್ನು
ಈಯ್ ನಿನ್ನ ಮಗಗೆ.
ನಿನ್ನನ್ನು ನಂಬುವೆ
ನಿರಂತಕಾಲಕೆ
ಕೈ ಹಿಡಿ ದೇವರೇ.

Go to top