Verse 1

ದೇವಾ ನೀ ನೆನಸು
ನಿನ್ನಾತುಕೊಂಡಿದ್ದೇನೆ.
ನಾ ಮೊರೆ ಇಡಲು
ನಿರ್ಭೀತನಾಗಿದ್ಧೆನೆ.
ಸಂಕಷ್ಟ ಬಂದರು
ಅಧೈರ್ಯ ಪಡೆನು
ಗಟ್ಟ್ಯಾಗಿ ಕೂಗುವೆ
ನನ್ನನ್ನು ನೆನಸು.

Verse 2

ದೇವಾ ನೀ ನೆನಸು
ಕೃಪಾಳು ಪ್ರಿಯ ತಂದೆ
ಕಾಪಾಡು. ನಿನ್ನನ್ನು
ಆಶ್ರೈಸಿಕೊಳ್ಳ ಬಂದೆ
ಈಗೇನು ಕಡಿಮೆ?
ಸಂತೃಪ್ತನಾದೆನು
ಇದೊಂದೆ ಭಾವನೆ
ನನ್ನನ್ನು ನೆನಸು.

Verse 3

ದೇವಾ ನೀ ನೆನಸು
ಮಹಾಪರಾಧಿಯಾದೆ.
ನಿನ್ನಾಜ್ಞೆ ತಂದೆಯೆ
ನಾ ಮಿರಿ ದೂರವಾದೆ.
ನಾ ಕೆಟ್ಟೆನಾದರು
ಕ್ರಿಸ್ತ್ಯೇಸು ಶುದ್ಧನು
ನಂಗಾತ ರಕ್ಷಕ
ನನ್ನನ್ನು ನೆನಸು.

Verse 4

ದೇವಾ ನೀ ನೆನಸು
ನನ್ನೆಲ್ಲ ಸಾಲವನ್ನು
ಕ್ರಿಸ್ತ್ಯೇಸು ತೀರಿಸಿ
ಅಶುದ್ಧ ಪಾಪಿಯನ್ನು
ವಿಮೋಚಿಸಿಹನು.
ನನ್ನಾಪ್ತ ಯೇಸುವು
ನಿನ್ನಾಪ್ತಲ್ಲವೋ?
ನನ್ನನ್ನು ನೆಸಸು.

Verse 5

ದೇವಾ ನೀ ನೆನೆಸು
ಆಪತ್ತು ಬರುವಾಗ
ನೀನೆನ್ನ ಬಿಡದೆ
ಜೀವಾಂತ್ಯ ಮುಟ್ಟಿದಾಗ
ಕಟಾಕ್ಷ ತೋರಿಸಿ
ನನ್ನಾತ್ಮ ಉಳುಹು.
ಕಡೇ ಸಂಕಷ್ಟದೊಳ್
ನನ್ನನ್ನು ನೆನಸು.

Verse 6

ದೇವಾ ನೀ ನೆನಸು
ನೀ ನಿಜ ನೆಪ್ಪುಗಾರ
ಕ್ರೂಜೇಲಿ ಕಳ್ಳನು
ನೀ ನುಡಿದಾ ಪ್ರಕಾರ
ಪರ್ದೈಸ ಸೇರಿದ
ವಿಮುಕ್ತಿ ಪಡೆದು.
ನನ್ನನ್ನು ಹಾಗೆಯೆ
ದೇವಾ ನೀ ನೆನಸು.

Verse 7

ದೇವಾ ನೀ ನೆನಸು
ನಿನ್ನಾತುಕೊಂಡಿದ್ದೇನೆ
ನಾ ಮೊರೆ ಇಡಲು
ನಿರ್ಭೀತನಾಗಿದ್ದೇನೆ.
ಸಂಕಷ್ಟ ಬಂದರು
ಅಧೈರ್ಯ ಪಡೆನು
ಗಟ್ಟ್ಯಾಗಿ ಕೂಗುವೆ
ನನ್ನನ್ನು ನೆನಸು.

Go to top