Verse 1

ನಿನ್ನ ಆತ್ಮಕ್ಕಿನ್ನು
ಬಲವಿಲ್ಲದೆ
ಯುದ್ಧದಲ್ಲಿ ಇನ್ನು
ಜಯ ಹೊಂದದೆ
ನೀನು ಇರುವಲ್ಲಿ
ಎಚ್ಚರಾಗಿರು.
ವೃದ್ಧಿಗಡ್ಡಿ ಎಲ್ಲಿ?
ಮನ ಶೋಧಿಸು.

Verse 2

ಮಳೆ ಬಿಟ್ಟು ಹೋಗೆ
ಹೊಲನಷ್ಟವು
ಆತ್ಮವೃಷ್ಟಿ ಹೋಗೆ
ಪ್ರಾಣನಷ್ಟವು.
ಹೊಂದು ಮೇಲಿನಿಂದ
ದಿವ್ಯ ವೃಷ್ಟಿಯ   
ನಿತ್ಯ ಬುಗ್ಗೆಯಿಂದ
ಆತ್ಮತೀರ್ಥವ.

Verse 3

ಸೂರ್ಯತೇಜದಿಂದ
ಶೋಭೆ ದೇಹಕ್ಕೆ
ಶ್ರೀಸನ್ನಿಧಿಯಿಂದ
ಕಾಂತಿ ಆತ್ಮಕ್ಕೆ
ದೇವಪ್ರಭೆಯಲ್ಲಿ
ನಿಂತುಕೊಂಡಿರು
ಪ್ರೇಮಸಿಂಧುವಲ್ಲಿ
ಐಕ್ಯವಾಗಿರು.

Verse 4

ಹುಳ ಕೊರೆದಾಗ
ಮರ ಬಾಳದು
ಕಪಟವಿದ್ದಾಗ
ಭಕ್ತಿ ಹೆಚ್ಚದು.
ಇಂದ್ರಿಯಂಗಳನ್ನು
ಬಿಗಿ ಹಿಡಿದು
ಗುಪ್ತ ಬಂಧವನ್ನು
ಹೋಗಲಾಡಿಸು.

Verse 5

ಯೇಸುಜ್ಯೋತಿಯಲ್ಲಿ
ನಡೆಯುತ್ತಿರು
ಯೇಸುಕಿವಿಯಲ್ಲಿ
ಪಾಪ ತಿಳಿಸು.
ಯೇಸುರಕ್ತದಲ್ಲಿ
ಮನಶ್ಯುದ್ಧಿಯು
ಯೇಸು ಐಕ್ಯದಲ್ಲಿ
ಜಯ ಶಕ್ತಿಯು.

Verse 6

ಹೀಗೆ ಬೇರು ಸಲೆ
ಊರಿಕೊಳ್ಳಲು
ದಿವದಿಂದ ಮಳೆ
ಸುರಿಯುತ್ತಲು
ಆತ್ಮಕ್ಕೆ ಆಹಾರ
ದೊರಕುತ್ತಲು
ಮರವಿನ್ನು ಭಾರ
ಫಲ ಕೊಡೊದು.

Go to top