Verse 1

ಬನ್ನಿ ಶಿಷ್ಯರೇ
ಯೇಸುದಾಸರೇ
ಸತ್ಯ ದೇವಭಕ್ತರೇ.
ನಂಬಿಕೊಳ್ಳಿ ನೆಲೆಗೊಳ್ಳಿ
ಯೇಸುವಾಕ್ಯದಲ್ಲಿಯೇ.

Verse 2

ಎಷ್ಟೋ ಜನರು
ಕೆಟ್ಟು ಹೋದರು
ಮದ್ಯಪಾನದಿಂದಲೇ.
ಮಹಾಮಾರಿ ಮೋಕ್ಷದಾರಿ
ತಪ್ಪಿಹೋಗ ಮಾಡುತೆ.

Verse 3

ಬಹು ಮೋಹದಿ
ಚಂದ ವೇಷದಿ
ಭಕ್ತಗುರ್ಲು ಒಡ್ಡಲು
ಅಪ್ಪಿತಪ್ಪಿ ಬುದ್ಧಿತಪ್ಪಿ
ಬಿದ್ದರಾಯ್ತು ನಷ್ಟವು.

Verse 4

ಯೇಸುಭಕ್ತನು
ಜಾರಿ ಬೀಳಲು
ವೈರಿಗಾಯ್ತುಲ್ಲಾಸವೇ.
ನಮ್ಮಪಾಯ ವೈರಿಗಾಯ
ತಿದ್ದೀ ಸ್ಥಿತಿ ದೇವರೇ.

Verse 5

ವೈರಿಮಂತ್ರವ
ಎಲ್ಲ ತಂತ್ರವ
ಬಲ್ಲ ಯೇಸುಸ್ವಾಮಿಯೇ
ತಿಳುಕೊಳ್ಳ ತಪ್ಪಿಕೊಳ್ಳ
ಬುದ್ಧಿ ತಾರೈ ಕರ್ತನೇ.

Verse 6

ಪ್ರಿಯ ತಂದೆಯೇ
ನಿನ್ನ ಮಂದೆಗೆ
ಎಷ್ಟೋ ಮೋಸವಾಯಿತು
ನೆಂಟ ಯಾರು ತುಂಟ ಯಾರು?
ಭೇದಾಭೇದ ತಿಳಿಸು.

Verse 7

ಶತ್ರುಮೋಹಕೆ
ಎಲ್ಲ ಮೋಸಕೆ
ತಪ್ಪಿ ಗೆದ್ದ ಯೇಸುವೇ
ನಿನ್ನ ಭಕ್ತಿ ನಿನ್ನ ಶಕ್ತಿ
ಆಸರಾಗಲೆಮಗೆ.

Go to top