Verse 1

ಎಚ್ಚತ್ತು ಬೇಡಿಕೊಳ್ಳಿರಿ
ಸದ್ಭಕ್ತ ಜನರೇ
ನಿಮ್ಮಾತ್ಮ ಕಾದುಕೊಳ್ಳಿರಿ
ದೇಹಾಂತ ವರೆಗೆ.

Verse 2

ಸೈತಾನ ನಿಮ್ಮ ಮಾನವ
ಕಪಾಡು ಬಿಡನು
ಸಂಪೂರ್ಣಮಾನಹಾನಿಯ
ದುರ್ಗತಿಗೊಯ್ವನು.

Verse 3

ಹೀಗಿದ್ದ ಮೇಲೆ ಜಾಗರ
ಅಗತ್ಯವಾಗಿದೆ
ಸನ್ಮಾನ ಕೆಟ್ಟ ಪುರುಷ
ಸತ್ತಾತನಲ್ಲವೆ?

Verse 4

ಸತ್ಥೋದ ಆತ್ಮ ಯಾವನು
ಎಬ್ಬಿಸಲಾರನು
ಕ್ರಿಸ್ತ್ಯೇಸು ಘನವೈದ್ಯನು
ಅದಕ್ಕೆ ಶಕ್ತನು.

Verse 5

ಸನ್ಮಾನ ಕಳಕೊಳದೆ
ಮರ್ಯಾದೆ ಕಾಯಿರಿ
ಕಾದಾಡ ಕಾಲ ಬಂದದೆ
ಸುಬೋಧೆ ಕೇಳಿರಿ.

Verse 6

ಸಾರಾಯಿಯಾಶೆ ತೊರೆದು
ದುಷ್ಕಾಮ ತ್ಯಜಿಸಿ
ಸನ್ಮಾನ ಮಾರ್ಗ ಹಿಡಿದು
ನೀವೆಲ್ಲ ಬಾಳಿರಿ.

Verse 7

ಸುಬೋಧೆ ಕೇಳಿ ನಡೆದು
ಕೊಂಡಿರ್ವ ನರನು
ಕ್ರಿಸ್ತ್ಯೇಸು ಒಲ್ಮೆ ಪಡೆದು
ನಿರಂತ್ರ ಬಾಳ್ವನು.

Go to top