Verse 1

ಸಿದ್ಧನಗು ಪ್ರಾರ್ಥಿಸು
ನಿದ್ರೆ ತಿಳಿದೇಳು.
ಪಕ್ಕನಾಪತ್ಕಾಲವು
ಬಂದರೇನು? ಹೇಳು
ಕಾಣದೆ
ಶೋಧನೆ
ಮುತ್ತ ಬಹುದಲ್ಲ?
ಹೊತ್ತು ಯಾರು ಬಲ್ಲ?

Verse 2

ಈಗಲೇಳು ಎಚ್ಚತ್ತು
ಪಾಪನಿದ್ರೆಯಿಂದ
ಅಲ್ಲಿ ತಪ್ಪಕೂಡದು
ಘೋರ ಶಾಪದಿಂದ.
ಕಾಲವು
ತುಂಬಲು
ಪರಿಹಾರವಿಲ್ಲ
ಆಚೆ ಕ್ಷಮೆಯಿಲ್ಲ.

Verse 3

ಎಚ್ಚರಕ್ಷಿ ತೆರೆದು
ಕಣ್ಬಿ ಕ್ರಿಸ್ತನನ್ನು
ನಿದ್ರಾಲೋಲ ನೋಡನು
ದಿವ್ಯ ಬೆಳಕನ್ನು.
ದೇವರ
ಕೃಪೆಯ
ವ್ಯರ್ಥ ನಿದ್ರೆಗಾರ
ಎಂದು ಹೊಂದಲಾರ.

Verse 4

ಎಚ್ಚರಾಗು ಕೆಡಕ
ಹೊಂಚಿ ನೋಡುತ್ತಾನೆ
ನಿನ್ನ ನುಂಗಿ ನಶಿಸ
ಸಿದ್ಧನಾಗಿದ್ದಾನೆ.
ಎಚ್ಚರ
ಇರುವ
ಭಕ್ತ ಜಯಸೋನು
ಜೀವ ಪಡೆಯೋನು.

Verse 5

ದುಷ್ಟ ಮಿತ್ರಗೆಚ್ಚರ
ಉರ್ಲನೊಡ್ಡಿದ್ದಾನೆ.
ಎಚ್ಚರಾತ್ಮವಂಚಕ
ಸುತ್ತು ಕಾಯುತ್ತಾನೆ
ಜಾಗ್ರತೆ
ಪಕ್ಕನೆ
ನೀನು ಕ್ಷಣದಲ್ಲಿ
ಬಿದ್ದೀ ಮೋಸದಲ್ಲಿ.

Verse 6

ನಿದ್ರೆ ಬಿಟ್ಟು ಪ್ರಾರ್ಥಿಸು
ನಿನ್ನ ದೇವರನ್ನು
ಆತ ರಕ್ಷೆ ಮಾಡೊನು
ಬೇಡುವವನನ್ನು.
ಬೇಡದೆ
ಇದ್ದರೆ
ಗತಿ ನಿನಗಿಲ್ಲ
ಗರ್ವಿ ಬಾಳೊದಿಲ್ಲ.

Verse 7

ಬೇಡುತೆಚ್ಚರಾಗಿರು
ಬೇಡಿ ಕಷ್ಟ ಮಾಡು.
ಬೇಡಿ ಉಂಡು ಮಲಗು
ಬೇಡಿ ಹೋರನಾಡು.
ಒಡೆಯ
ಬೇಡುವ
ಭಕ್ತಗೆ ದಯಾಳು
ಬೇಡಿ ಬೇಡಿ ಬಾಳು.

Go to top