Verse 1

ಸತ್‍ಕ್ರೈಸ್ತ ಧರ್ಮ ಸೌಖ್ಯವೆ
ಸುಲಭ್ಯವಾದ್ದು ಶುದ್ಧ ಆತ್ಮನೀತಿ
ಕ್ರಿಸ್ತ್ಯೇಸುವೊಡ ಸಾಯೊಕಟ್ಟಳೆ
ಸ್ವಭಾವ ಬುದ್ಧಿಗೊಪ್ಪದಂಥ ರೀತಿ
ಆದಾಗ್ಯು ದೇವಕೃಪೆ ಎಂದಿಗು
ಸೋತ್ಹೋಗದು.

Verse 2

ಬಾಲಂಗೆ ಚಿಂತೆ ಬೇಡವು
ಸತ್ಪ್ರೀತಿನೇಮ ಕೆಟ್ಟ ನೊಗವಲ್ಲ.
ಅಧೈರ್ಯ ನಿನಗ್ಯಾಕೆ ನೆನಸು
ತಾಯ್ಯನ್ನು ಮಗು ಪ್ರೀತಿ ಮಾಡಬಲ್ಲ.
ಈ ಭಯ ಬಿಡು ನಿನ್ನ ಕಷ್ಟವು
ಹೆಚ್ಚಾಗದು.

Verse 3

ಕೃಪಾಬ್ದಿಹೊಯ್ಯ ತಂದೆಯು
ನಿನ್ ಹೃದವನ್ನು ಕೇಳಿಕೊಳ್ಳುತಾನೆ.
ಸ್ವಚಿತ್ತಮಾತ್ರ ನಿನ್ನ ಕಾಡ್ಪುದು
ನಿನ್ನಪ್ಪ ಪ್ರೀತಿಪೂರ್ಣನಾಗಿದ್ದಾನೆ.
ಸ್ವಚಿತ್ತ ಭ್ರಾಂತಿ ಹೋಗೆ ತೊಂದರೆ
ಬಿಟ್ಠೋಗುತೆ.

Verse 4

ಸ್ವಜೀವ ತಿಂಬೊ ಚಿಂತೆಯ
ಹೃದ್‍ಗೃಹದಿಂದ ಕಿತ್ತು ಬಿಸುಟಾಡು.
ಭಯಾದಿ ವೈರಿಗಳ ಸಂಗಡ
ನೀನೆದೆಗೊಂಡು ದೃಢ ಹೋರನಾಡು.
ಕಟಾಕ್ಷವಿಡುಎನ್ನಲಾಯಿತು
ಇಷ್ಟಾರ್ಥವು.

Verse 5

ಸಹಾಯ ಕಾಣದಿದ್ದರು
ನೀ ಬೇಗ ಬಿಡ ಬೇಡ ತಾಳ್ಮೆಯನ್ನು
ಅಶಕ್ತನಾಗಿ ಬಿದ್ದು ಹೋಗಲು
ನೀ ಹಿಡುಕೊಳ್ಳು ಹೊಸ ಧೈರ್ಯವನ್ನು
ಸಂಪೂರ್ಣ ಕ್ಷಮೆ ನಂಬು ಕೊಟ್ಟದೆ
ವಿಶ್ವಾಸಿಗೆ.

Verse 6

ಕಗ್ಗಾನಕಾವಳಿದ್ದರು
ಸುಭದ್ರನಾಗಿದ್ದೀ ವಿಶ್ವಾಸದಿಂದ
ತುಫಾನು ಬಂದರೇನು? ತಂದೆಯು.
ನಿನ್ನನ್ನು ಕಾಯುತಾನೆ ಪ್ರೀತಿಯಿಂದ
ನಂಬಲ್ಕೆ ದಾರಿ ಕಾಣದ್ಹೋದರು
ನೀ ನಂಬಿರು.

Verse 7

ಮೂಡೀತು ಹೊಸ ಬೆಳಕು
ಸಂರಕ್ಷೆತೇಜವನ್ನು ಕಂಡುಬಾಳ್ವಿ
ನಾನೀಯುತೇನೆ ಎಂತ ತಂದೆಯು
ನಿಂಗ್ಹೇಳಿದಧಿಕಾರಿ ಹೊಂದಿ ಆಳ್ವಿ.
ಹಾ ಎಂಥ ಹರ್ಷ ನೋಡು ಮನವೆ
ಸತ್ತ್ ಕ್ರೈಸ್ತಗೆ.

Verse 8

ಏಳೇಳು ತಡ ಮಾಡದೆ
ಆಶ್ರೈಸು ಪುತ್ರ ನಿಜ ಪಿತನನ್ನು
ಸಂದೇಹವೆಲ್ಲ ಬಿಟ್ಟು ಹೃದವೆ
ಸೇರ್ ಸೇರು ಭಕ್ತಿಯಿಂಪು ಶಾಂತಿಯನ್ನು
ಬಾ ಚಿಂತಾಭಾರ ಒಪ್ಪಿಸಂಜದೆ
ನಿನ್ನೀಶಗೆ.

Go to top