Verse 1

ಸತ್‍ಕ್ರೈಸ್ತಧರ್ಮ ಕಷ್ಟವು
ದುರ್ಲಭ್ಯವಾದ್ದು ಶುದ್ಧ ಆತ್ಮನೀತಿ.
ಕ್ರಿಸ್ತ್ಯೇಸುವೊಡ ನಿತ್ಯ ಸಾಯೊದು
ಸ್ವಭಾವ ಬುದ್ದಿಗೊಪ್ಪದಂಥ ರೀತಿ
ಈ ಯುದ್ಧದಲ್ಲಿ ಒಂದೆ ಜಯವು
ಸಾಕಾಗದು.

Verse 2

ಹಾದೀಲಿ ಹಾವ ಜಾಳಿಗೆ
ನಿನ್ನಡಿ ಕಚ್ಚಲಾಗಿ ಪ್ರಾಣಲಯ
ನಿವಾರಿಸೋದು ಕಷ್ಟವಾದದೆ.
ಉಂಟ್ಹಗಲಿರುಳಲ್ಲಿ ವಿಷಭಯ
ತಾತ್ಸಾರಮಾಡೆ ನಷ್ಟ ತಪ್ಪದು.
ಎಚ್ಚತ್ತಿರು.

Verse 3

ಈ ಕಷ್ಟ ಕಂಜ ಬಾರದು
ನಿರಂತ್ರವಾದ ಮಹಿಮಾತಿಶಯ
ಕಡೇಲಿ ನಿನ್ನದೇ. ವಿಶ್ವಾಸಿಸು
ಚನ್ನಾಗಿ ಹೋರುತ್ತಿರೆ ನಿಂಗೆ ಜಯ.
ಸಾಮರ್ಥ್ಯವನ್ನು ದಿವ್ಯಕೃಪೆಯೆ
ಈಯುತ್ತದೆ.

Verse 4

ಸರ್ವೇಶ ಪುತ್ರನಾಗುವಿ
ಅನಾದಿ ಪ್ರಭೆ ನಿನ್ನೊಳ್ ಮಿಂಚಲಾಗಿ
ವಿಶುದ್ಧ ತೇಜದೇಹಿಯಾಗುವಿ
ಮಹಾ ಪ್ರಕಾಶ ಪ್ರತಿಕಾಮತಿಯಾಗಿ
ಸಾರೂಪ್ಯನಾಗಿ ತಂದೆಯೈಕ್ಯದಿ
ಇದ್ದಿರುವಿ.

Verse 5

ಆ ಲೋಕದಲ್ಲಿ ಮುಕ್ತಿಯ
ಮಗಂಗೆ ತಂದೆ ಇಟ್ಟುಕೊಂಡಿದ್ದಾನೆ
ಅಪಾರವಾದ ಬಹುಮಾನವ
ಭಕ್ತಂಗೆ ಆತ ಸಿದ್ಧಮಾಡುತಾನೆ
ಕಿರೀಟವನ್ನು ಭ್ರಾತಗೀಯ್ವನು
ಕ್ರಿಸ್ತ್ಯೇಸುವು.

Verse 6

ಎಚ್ಚತ್ತು ಏಳು ಮನವೇ
ಪ್ರಪಂಚಭ್ರಾಂತಿ ಇನ್ನು ನಿನಗ್ಯಾಕೆ?
ಬೇಕಾದ ತ್ರಾಣವಾತ ಕೊಡನೇ?
ಅಧೈರ್ಯ ಅವಿಶ್ವಾಸ ನಿನಗ್ಯಾಕೆ?
ಈ ಕಷ್ಟ ತೀರೆ ಎಷ್ಟೋ ಒಳ್ಳೇದು
ವಿಶ್ರಾಂತಿಯು.

Go to top