Verse 1

ಕೇಳೆಮ್ಮ ಗುರು ಯೇಸುವು
ಒಬೊಬ್ಬ ಭಕ್ತನನ್ನು
ನಿನ್ನನ್ನು ಅಲ್ಲಗಳೆದು
ನೀ ತಾಳು ಕ್ರೂಜೆಯನ್ನು
ಹೀಗೆನ್ನ ಬೆನ್ನು ಹತ್ತ ಬಾ
ಎಂದೆಚ್ಚರಿಸಿ ಕರೆದ.

Verse 2

ನಾ ಬೆಳಕೇ ಈ ಲೋಕವು
ಕಾರ್ಗತ್ತಲ್ ಇಲ್ಲಿ ಭ್ರಾಂತಿ
ನಿನ್ನನ್ನು ಹಿಡಿದಿರಲು
ನಾ ಕೊಡುತೇನೆ ಶಾಂತಿ.
ನೀನೆನ್ನ ಬೆನ್ನು ಹತ್ತ ಬಾ
ಎಂದ್ಹೇಳಿ ಯೇಸು ಕರೆದ.

Verse 3

ನಾ ಮಾರ್ಗ ಸತ್ಯ ಜೀವವು
ತಂದೇ ಸಮಿಪ ಸೇರ
ನನ್ನನ್ನು ಬಿಟ್ಟರಾಗದು
ವಿಶ್ವಾಸಿಯನ್ನುದ್ಧಾರ
ನಾನೊಬ್ಬ ಮಾತ್ರ ಮಾಡುವೆ
ನೀವೆಲ್ಲಾ ಬರ್ರಿ ಬೇಗನೇ.

Verse 4

ಈ ನಿನ್ನ ಮಾತು ಕೇಳಿದೆ
ನನ್ನತಿ ಪ್ರಿಯ ಯೇಸು
ನಾ ನಿನ್ನ ಹಿಂದೆ ಬರುವೆ
ನಂಗಿನ್ನು ಕ್ರೂಜೆ ಲೇಸು.
ನನ್ನನ್ನು ತಂದೆಮನಗೆ
ವೈ ನನ್ನ ಗುರು ಯೇಸುವೆ.

Go to top