Verse 1

ಕ್ರಸ್ತನ ಸಂಗತರಾಗುವ
ಆತನು ಮಹಿಮೆ ಯಿಂದ್‍ಲೆ ಬಂದ
ತೊಳಲಿ ತಪ್ಪಿದ ಪ್ರಾಣಿಯ
ಹುಡುಕಿ ಬಿಡಿಸಿ ಹಿಂಡ್‍ಗೆ ತಂದ
ಆತನು ಉತ್ತಮ ಕುರುಬ
ಕ್ರಿಸ್ತನ ಸಂಗತರಾಗುವ.

Verse 2

ಕ್ರಿಸ್ತನ ಸಂಗಡ ತಾಳುವ
ಆತನು ಕ್ರೂಜೆಯನ್ನಾರ್‍ಸಿಕೊಂಡ
ನಿಂದೆಗೆ ಮಾಡದೆ ನಿಂದೆಯ
ತಾಳಿದ ಬಳಿಕ ಹರ್‍ಷಗೊಂಡ.
ಆತನ ಹಿಂದೆಯೇ ಹೋಗುವ
ಕ್ರಿಸ್ತನ ಸಂಗಡ ತಾಳುವ.

Verse 3

ಕ್ರಿಸ್ತನ ಸಂಗಡ ಸಾಯುವ
ಆತನು ಪಾಪಕ್ಕೆ ಸತ್ತ್ ಪ್ರಕಾರ.
ಪಾಪವ ಕ್ರೂಜೆಗೆ ಹಾಕುವ
ಭೋಗಿಯು ಸ್ವರ್ಗದಿ ಬದ್‍ಕಲಾರ
ಹೊಂದುವನಿಮ್ಮಡಿ ಮೃತ್ಯುವ
ಕ್ರಿಸ್ತನ ಸಂಗಡ ಸಾಯುವ.

Verse 4

ಕ್ರಿಸ್ತನ ಸಂಗಡ ಬಾಳುವ
ತಲೆಯು ತಿರುಗಿ ಎದ್ದ್‍ದರಿಂದ
ಅಂಗವು ಏಳೋದು ನಿಶ್ಚಯ
ನಮ್ಮನ್ನು ತಾಯಿಯ ಮಮ್‍ತೆಯಿಂದ
ತಾನಿರುವಲ್ಲಗೆ ವೈಯುವ
ಕ್ರಿಸ್ತನ ಸಂಗಡ ಬಾಳುವ.

Go to top