Verse 1

ಪರಲೋಕಕೆಂದಿಗು
ಮಾರ್ಗ ಹಿಡಿದು
ಹೋಗು ಅಲ್ಲಿ ತುಂಬೊದು
ಭಕ್ತರಾಶೆಯು.
ಭೂಲೋಕದಿ
ಸುಖದುಃಖವಾಗುತೆ
ಮಹಿಮೆಯ ಕಡೆಗೆ
ಕಣ್ಣಿರಲಿ.

Verse 2

ನಿತ್ಯ ನೀನು ಅಲ್ಲಿಯೆ
ಮನವಿರಿಸು
ಈ ಪ್ರಯಾಣ ಶೀಘ್ರವೆ
ತೀರಿ ಹೋಗೋದು.
ಯಾವಾಗಲು
ಪರಮಾರ್ಥ ಮುಕ್ತಿಗೆ
ಸಿದ್ಧನಾಗಿರೋದಕೆ
ಎಚ್ಚತ್ತಿರು.

Verse 3

ಪರಲೋಕದಾಲಯ
ನಿನ್ನ ಗತಿಯು
ಈ ಪ್ರಪಂಚಮಾಯದ
ಚಿಂತೆ ಬೇಡವು.
ವಿಸರ್ಜಿಸು
ಲೋಕದಾಶೆ ಮನವೇ
ಪರಲೋಕದಾಸ್ತಿಯೇ
ನಿರ್ಲಯವು.

Verse 4

ಕರ್ತನನ್ನು ದೃಷ್ಟಿಸಿ
ಮೋಕ್ಷ ಸೇರಲು
ಹಲ್ಲೆಲೂಯ ಹಾಡುವಿ
ಎಂಥ ಸುಖವು.
ವಿಜಯವು
ಕ್ರೂಜೆಯಿಂದ ಪೀಠಕೆ
ಎದ್ದ ಜಯಶಾಲಿಗೆ
ವಿಜಯವು.

Go to top