Verse 1

ಜೀವವನ್ನ
ಹೊಂದ ನನ್ನ
ಆಶೆ ಇಹುದು
ದೃಢದಿಂದ
ಇಂದಿನಿಂದ
ತಡ ಮರೆತು
ಹೋಗುತೇನೆ ಗುರಿಗೆ
ಹಿಂದಕೆಂದು ದೃಷ್ಟಿಸೆ
ಎಲ್ಲ ಬಿಟ್ಟು
ಮನಸಿಟ್ಟು
ಅರ್ಸಿಕೊಂಬೆನು.

Verse 2

ಪೀಠಕಾಗಿ
ಓಡಲಾಗಿ
ತ್ವರೆ ಪಡುವೆ
ಲಾಭವೇನು
ಕೀರ್ತಿಯೇನು
ಉದಾಸೀನಗೆ?
ಯುದ್ಧದೊಳ್ ಮೈಗಳ್ಳನು
ಜಯ ಹೊಂದ ಕೂಡದು
ನಿದ್ರೆಗಾರ
ಗೆಲ್ಲಲಾರ
ನೆನೆ ಮನವೆ.

Verse 3

ಮಾರ್ಗದಲ್ಲಿ
ಕುಂದುವಲ್ಲಿ
ಮೋಕ್ಷದಶೆಗೆ
ನೋಡಿನನ್ನ
ದೃಷ್ಟಿಯನ್ನ
ತಪ್ಪಗೊಡದೆ
ಮುಂದೆ ಮುಂದೆ ನಡೆದು
ಮೋಕ್ಷ ಅರ್ಸಿಕೊಂಬೆನು
ಯೇಸು ದಯ
ಮಾಡಿ ಜಯ
ಕೊಡು ನನಗೆ.

Verse 4

ಕೇಳು ನಿನ್ನ
ಶಿಶುವಿನ
ಮೊರೆ ತಂದೆಯೆ
ಶಕ್ತಿಯಾದ
ಆಶೀರ್ವಾದ
ಕೊಡು ಕ್ರಿಸ್ತನೆ
ಜ್ಞಾನ ತ್ರಾಣವೆರಡೇ
ಕೊಡು ದೇವರಾತ್ಮನೇ
ಜೀವವನ್ನ
ಹೊಂದ ನನ್ನ
ಆಶೆಯಾದದೆ.

Go to top