Verse 1

ಪುನರ್ಜನ್ಮವಿಲ್ಲದೆ
ದೇವರಾಜ್ಯವ
ಸೇರೋ ಮಾರ್ಗ ನರಗೆ
ಇಲ್ಲವಕಟ.
ದಿವ್ಯಾತ್ಮನು
ಹೃದದೊಳು ಸೇರೋದೂ
ನವಸೃಷ್ಟಿಯಾಗೋದು
ಅವಶ್ಯವು.

Verse 2

ಪಾಪ ಮಾಡಿ ಎಲ್ಲರು
ಭೇದವಿಲ್ಲದೆ
ಕಳಕೊಂಡು ಬಿಟ್ಟರು
ದೇವ ಮಹಿಮೆ.
ಪುಣ್ಯತ್ಮರು
ನರರಲ್ಲಿ ಸಿಕ್ಕರು.
ತಪ್ಪಿ ಹೋಗಿ ಆದರು
ಪಾಪಾತ್ಮರು.

Verse 3

ಮಾಂಸದಿಂದ ಹುಟ್ಟಿದ್ದು
ಮಾಂಸವಾಗಿದೆ.
ಸ್ವಚ್ಛ ಗುಣವಿರದು
ಆತ್ಮನಿಲ್ಲದೆ.
ಈ ನುಡಿಯ
ನಂಬಿಗಸ್ತ ಸಾಕ್ಷಿಯು
ತಾನೇ ಹೇಳಿ ಕೊಟ್ಟನು
ನಿರುತ್ತರ.

Verse 4

ಪ್ರಿಯ ಯೇಸು ಕ್ರಿಸ್ತನೇ
ಹೊಸ ಹೃದಯ
ನಿನ್ನ ಬಡ ಬಾಲಗೆ
ಕೃಪೆಯಿಂದ ತಾ
ವಿಮೋಚಕ
ಕಿತ್ತು ಪಾಪಬೇರನ್ನು
ಹೊಸತಾಗಿ ಸೃಷ್ಟಿಸು
ನನ್ನಾತ್ಮವ.

Verse 5

ದಯಪಾಲಿಸೆನಗೆ
ನಿನ್ನ ಆತ್ಮವ
ಕೊಡು ನನ್ನ ಹೃದಕೆ
ಸಮಾಧಾನವ
ಉದ್ಧಾರಕಾ
ನೀನು ಜಯ ಕೊಟ್ಟರೆ
ನಿತ್ಯವೂ ನಾ ಹಾಡುವೆ
ಹಲ್ಲೆಲೂಯ.

Go to top